ವಿದೇಶ

ಕಾಂಬೋಡಿಯಾ ಹೋಟೆಲ್-ಕ್ಯಾಸಿನೊದಲ್ಲಿ ಬೆಂಕಿ ಅವಘಡ: ಹತ್ತು ಮಂದಿ ಸಾವು, 30 ಜನರಿಗೆ ಗಾಯ

Ramyashree GN

ನೋಮ್ ಪೆನ್: ಥಾಯ್ಲೆಂಡ್‌ನ ಗಡಿಯಲ್ಲಿರುವ ಕಾಂಬೋಡಿಯನ್ ಹೋಟೆಲ್ ಕ್ಯಾಸಿನೊದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪೊಯಿಪೆಟ್‌ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಸಿಟಿ ಕ್ಯಾಸಿನೊ-ಹೋಟೆಲ್‌ನಲ್ಲಿ ಬುಧವಾರ ತಡರಾತ್ರಿ ಸುಮಾರು ಸ್ಥಳೀಯ ಕಾಲಮಾನ 11.30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾಂಬೋಡಿಯನ್ ಪೊಲೀಸರು ತಿಳಿಸಿದ್ದಾರೆ.

ಎಎಫ್‌ಪಿ ವರದಿಯ ಪ್ರಕಾರ, 'ಅವಘಡದಲ್ಲಿ ಸುಮಾರು 10 ಜನರು ಮೃತಪಟ್ಟಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ' ಎಂದು ಹೇಳಿದ್ದು, ಸುಮಾರು 400 ವ್ಯಕ್ತಿಗಳು ಕ್ಯಾಸಿನೊದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ತುಣುಕಿನಲ್ಲಿ ಹೋಟೆಲ್‌ನ ಬೃಹತ್ ಸಂಕೀರ್ಣವು ಉರಿಯುತ್ತಿದ್ದು, ಜನರು ಕಟ್ಟಡದಿಂದ ಜಿಗಿಯುವುದನ್ನು ತೋರಿಸುವುದನ್ನು ನೋಡಬಹುದು.
ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಕ್ಯಾಸಿನೊದಲ್ಲಿ ವಿದೇಶಿ ಪ್ರಜೆಗಳು ಇದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಥಾಯ್ ವಿದೇಶಾಂಗ ಸಚಿವಾಲಯದ ಮೂಲವೊಂದು ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದ್ದಾರೆ. ಗಾಯಗೊಂಡವರನ್ನು ಥೈಲ್ಯಾಂಡ್‌ನ ಸಾ ಕೆಯೊ ಪ್ರಾಂತ್ಯದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಥಾಯ್ಲೆಂಡ್ ಕಡೆಯಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸುವ ಮೂಲಕ ಬೆಂಕಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದೆ.

ಥಾಯ್ ರಕ್ಷಣಾ ಕಾರ್ಯಾಚರಣೆಯ ಗುಂಪಿನ ರುವಾಮ್ಕಟಾನ್ಯು ಫೌಂಡೇಶನ್‌ನ ಸ್ವಯಂಸೇವಕರೊಬ್ಬರು, ಬೆಂಕಿಯು ಮೊದಲ ಮಹಡಿಯಲ್ಲಿ ಹೊತ್ತಿಕೊಂಡಿತು. ಬಳಿಕ ಕಟ್ಟಡದ ಉದ್ದಕ್ಕೂ ಹರಡಿತು. ಬಹುಮಹಡಿ ಕಟ್ಟಡದ ಮೂಲಕ ಮೇಲಕ್ಕೂ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿಸಿದ್ದಾರೆ.

ಗ್ರ್ಯಾಂಡ್ ಡೈಮಂಡ್ ಸಿಟಿಯು ಥಾಯ್-ಕಾಂಬೋಡಿಯನ್ ಗಡಿಯಲ್ಲಿ ಹಲವಾರು ಕ್ಯಾಸಿನೊ-ಹೋಟೆಲ್‌ಗಳಲ್ಲಿ ಒಂದಾಗಿದೆ.

SCROLL FOR NEXT