ವಿದೇಶ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹಂತಕನನ್ನು ಹಿರೋ ಎಂದು ಕೊಂಡಾಡಿದ ಚೀನಾ ಸಾಮಾಜಿಕ ಜಾಲತಾಣ!

Srinivas Rao BV

ನವದೆಹಲಿ: ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಇಂದು ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಚೀನಾದ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಲಾಗುತ್ತಿದ್ದು, ಘಟನೆಯನ್ನು ಸಂಭ್ರಮಿಸಲಾಗುತ್ತಿದೆ.
 
ಶಿಂಜೋ ಅಬೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೀನಾ ಸಾಮಾಜಿಕ ಜಾಲತಾಣದಲ್ಲಿ ಅವರ ಸಾವನ್ನು ಬಯಸಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರು. 

ಶುಕ್ರವಾರ ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಶಿಂಜೋ ಅಬೆ ನಿಧನರಾದರು. 

ಚೀನಾದ ಸಾಮಾಜಿಕ ಜಾಲತಾಣ ವೈಬೋದಲ್ಲಿ ಶಿಂಜೋ ಅಬೆ ಮೇಲಿನ ದಾಳಿಯನ್ನು ಸಂಭ್ರಮಿಸಲಾಗುತ್ತಿದ್ದು, ಹಂತಕನನ್ನು ಹಿರೋ ಎಂದು ಬಣ್ಣಿಸಲಾಗುತ್ತಿದೆ ಎಂದು ಟ್ವಿಟರ್ ಖಾತೆಯೊಂದರ ಮೂಲಕ ತಿಳಿದುಬಂದಿದೆ. 

ಟ್ವಿಟರ್ ನಲ್ಲಿ ಆಸ್ಟ್ರೇಲಿಯಾ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಚೀನಾ ಪ್ರಜೆಗಳ ಪೋಸ್ಟ್ ಗಳನ್ನು ಹಾಗೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಬಹಿರಂಗಪಡಿಸಿದ್ದಾರೆ.

ದಾಳಿ ನಡೆದ ಬೆನ್ನಲ್ಲೇ ಶಿಂಜೋ ಅಬೆ ಅವರು ಸ್ಪಂದಿಸದೇ ಇರುವ ಹಾಗೂ ಜೀವಂತವಿರುವ ಪ್ರಮುಖ ಆರೋಗ್ಯ ಲಕ್ಷಣಗಳನ್ನು ತೋರಿಸದೇ ಇರುವುದನ್ನು ಹ್ಯಾಷ್ ಟ್ಯಾಗ್ ಮೂಲಕ ಹೇಳಿಕೊಂಡು ಶಿಂಜೋ ಅಬೆ ಅವರ ಸಾವನ್ನು ಕೋರಲಾಗುತ್ತಿತ್ತು ಎಂದು ಟ್ವಿಟರ್ ನಲ್ಲಿ ಆಸ್ಟ್ರೇಲಿಯಾ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸ್ಕ್ರೀನ್ ಶಾಟ್ ಸಮೇತ ಆರೋಪಿಸಿದ್ದಾರೆ.

SCROLL FOR NEXT