ವಿದೇಶ

ಪ್ರಧಾನಿ ಹುದ್ದೆಗೆ ಯಾರನ್ನು ಬೇಕಾದರೂ ಬೆಂಬಲಿಸಿ, ಆದರೆ ರಿಷಿ ಸುನಕ್ ಬೇಡ: ಬೆಂಬಲಿಗರಿಗೆ ಬೋರಿಸ್ ಜಾನ್ಸನ್

Srinivas Rao BV

ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ಇನ್ನೂ ತೀವ್ರಗೊಳ್ಳುತ್ತಿದ್ದು, ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ನ್ನು ಬೇಡ ಎಂದು ಬ್ರಿಟನ್ ನ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಜಾನ್ಸನ್ ಅವರಿಗೆ ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ರಿಷಿ ಸುನಕ್ ಅವರನ್ನು ದೂಷಿಸಲಾಗುತ್ತಿದ್ದು, ರಿಷಿ ಬ್ರಿಟನ್ ಪ್ರಧಾನಿಯಾಗಬಾರದೆಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಲ್ಲಿ ಹೇಳಿದ್ದಾರೆ ಎಂದು ಟೈಮ್ಸ್ ವರದಿ ಪ್ರಕಟಿಸಿದೆ.

ಯಾವುದೇ ಅಭ್ಯರ್ಥಿಗಳನ್ನೂ ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಜಾನ್ಸನ್ ಈಗ ಸೋತಿರುವ ಅಭ್ಯರ್ಥಿಗಳ ಬಳಿ ರಿಷಿ ಬ್ರಿಟನ್ ಪ್ರಧಾನಿಯಾಗಬಾರದು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ.

ಜೂನಿಯರ್ ಟ್ರೇಡ್ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ  ಆದರೂ ಸರಿಯೇ ಅದರೆ ಸುನಕ್ ಮಾತ್ರ ತಮ್ಮ ಉತ್ತರಾಧಿಕಾರಿಯಾಗಬಾರದು ಎಂದು ಜಾನ್ಸನ್ ಬಲವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇಡೀ ನಂ.10 (ಡೌನಿಂಗ್ ಸ್ಟ್ರೀಟ್) ರಿಷಿ ಅವರನ್ನು ಇಷ್ಟಪಡುವುದಿಲ್ಲ. ಬೋರಿಸ್ ಕೆಳಗಿಳಿಯುವುದಕ್ಕೆ ಸಾಜ್ (ಸಾಜಿದ್ ಜಾವೆದ್) ಅವರನ್ನು ದೂಷಿಸುವುದಿಲ್ಲ. ಆಡರೆ ರಿಷಿ ಅವರನ್ನು ದೂಷಿಸುತ್ತಾರೆ. ಅವರ ಪ್ರಕಾರ ರಿಷಿ ಇದಕ್ಕಾಗಿ ಕೆಲವು ತಿಂಗಳುಗಳಿಂದ ಯೋಜನೆ ರೂಪಿಸುತ್ತಿದ್ದರಂತೆ ಎಂದು ಮೂಲಗಳು ಬೋರಿಸ್ ಮನದಾಳಾದ ಮಾತುಗಳನ್ನು ಉಲ್ಲೇಖಿಸಿರುವುದನ್ನು ಟೈಮ್ಸ್ ವರದಿ ಮಾಡಿದೆ.

SCROLL FOR NEXT