ಪತ್ನಿಯೊಂದಿಗೆ ವೊಲೊಡಿಮಿರ್ ಝೆಲೆನ್‌ಸ್ಕಿ 
ವಿದೇಶ

ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್‌ಸ್ಕಿ ಟ್ರೋಲ್

ಉಕ್ರೇನ್‌ನಲ್ಲಿ ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್‌ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್‌ ಪೇಜ್‌ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಬಳಿಕ ಉಕ್ರೇನ್ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಅಂದಿನಿಂದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಲ್ಲಿನ ಜನರ ಭರವಸೆಯಾಗಿ ಹೊರಹೊಮ್ಮಿದ್ದಾರೆ ಮತ್ತು ಪರಿಸ್ಥಿತಿಯನ್ನು ತಾವೇ ನಿಂತು ಎದುರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಕ್ರೇನ್ ಮಾತ್ರವಲ್ಲದೆ ಇತರೆ ದೇಶಗಳಲ್ಲಿಯೂ ಝೆಲೆನ್‌ಸ್ಕಿ ಅವರ ವರ್ಚಸ್ಸು ಹೆಚ್ಚಾಗಿದೆ.

ಆದರೆ, ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್‌ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್‌ ಪೇಜ್‌ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ.

ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ತಮ್ಮ ಪತ್ನಿಯೊಂದಿಗೆ ವೋಗ್ ನಿಯತಕಾಲಿಕೆಗಾಗಿ ಫೋಟೊಶೂಟ್ ಮಾಡಿಸಿದ್ದಾರೆ. ಒಲೆನಾ ಅವರು ಉಕ್ರೇನ್‌ ಯೋಧರು ಮತ್ತು ಟ್ಯಾಂಕ್‌ ಬಳಿಯಲ್ಲಿಯೂ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೊಗಳನ್ನು ಸೆಲೆಬ್ರಿಟಿ ಫೋಟೊಗ್ರಾಫರ್ ಅನ್ನಿ ಲೀಬೊವಿಟ್ಜ್ ತೆಗೆದಿದ್ದಾರೆ. ಇವುಗಳನ್ನು ಝೆಲೆನ್‌ಸ್ಕಿ ಅವರ ಪತ್ನಿಯೇ ಸಾಮಾಜಿಕ ಮಾಧ್ಯಮಗಳ ತಮ್ಮ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

ರಷ್ಯಾ ತನ್ನ ದೇಶದ ಮೇಲೆ ಬಾಂಬ್ ದಾಳಿ ಮಾಡುತ್ತಿರುವಾಗ, ಝೆಲೆನ್‌ಸ್ಕಿ ವೋಗ್‌ಗಾಗಿ ಫೋಟೊಶೂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ನನಗೆ ನಂಬಲಾಗುತ್ತಿಲ್ಲ, ಇದು ತುಂಬಾ ಗಂಭೀರವಾಗಿದೆ ಎಂದು ಹಾನಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

ಮತ್ತೊಬ್ಬರು, ದೇಶದೊಳಗೆ ಯುದ್ಧವು ನಡೆಯುತ್ತಿದೆ. ಹೀಗಿರುವಾಗ ಝೆಲೆನ್‌ಸ್ಕಿ ಪತ್ನಿಯೊಂದಿಗೆ ವೋಗ್ ಫೋಟೊಶೂಟ್ ಮಾಡಿಸುವುದು ಬಹುಶಃ ದೇಶಕ್ಕೆ ಸಹಾಯವಾಗಬಹುದು! ಎಂದಿದ್ದಾರೆ.

ಹೀಗೆ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಫೋಟೊಶೂಟ್‌ಗೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT