ವಿದೇಶ

ಮಾಸ್ಕೊ: 15 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, 8 ಮಂದಿ ಸಜೀವ ದಹನ

Ramyashree GN

ಮಾಸ್ಕೊ: ರಷ್ಯಾದ ಮಾಸ್ಕೊದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 8 ಜನರು ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮಾಸ್ಕೊದ ಆಗ್ನೇಯ ಜಿಲ್ಲೆಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಗಾಯಗೊಂಡಿರುವ ನಾಲ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಪರಾಧ ಕೃತ್ಯಗಳ ತನಿಖಾ ಸಂಸ್ಥೆ ತಿಳಿಸಿದೆ

ಮೊದಲಿಗೆ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಮಧ್ಯರಾತ್ರಿಯ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಈ ವೇಳೆ 200ಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ತುರ್ತು ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡದಲ್ಲಿನ ಅಗ್ನಿ ಅನಾಹುತ ಸಂಭವಿಸಿದಾಗ ಫೈರ್ ಅಲಾರಾಂ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಅಲ್ಲದೆ, ಕಟ್ಟಡದ ಎಲ್ಲಾ ಕಿಟಕಿಗಳು ಕೂಡ ಲೋಹದವುಗಳಾಗಿದ್ದರಿಂದ ಜನರು ಒಳಗೆ ಸಿಲುಕಿಕೊಂಡಿದ್ದರು ಎಂದು ತುರ್ತು ಸೇವೆಗಳ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳಪೆ ನಿರ್ವಹಣೆ, ಮೂಲಸೌಕರ್ಯ ಅಥವಾ ನಿರ್ಲಕ್ಷ್ಯದ ಕಾರಣದಿಂದಾಗಿ ಆಗ್ಗಾಗ್ಗೆ ರಷ್ಯಾದ ಕಟ್ಟಡಗಳು ಬೆಂಕಿ ಅವಘಡ ಮತ್ತು ಅನಿಲ ಸೋರಿಕೆಗೆ ಒಳಗಾಗುತ್ತಿರುತ್ತವೆ.

SCROLL FOR NEXT