ವಿದೇಶ

ಬ್ರಿಟನ್‌ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗೆಲುವು!

Vishwanath S

ಮಥುರಾ: ಒಂದೆಡೆ ಬ್ರಿಟನ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರೆ, ಇನ್ನೊಂದೆಡೆ ಮಥುರಾದ ವಿದ್ಯಾರ್ಥಿ ಆದಿತ್ಯ ಲಾಥರ್ ಅವರು ಇಂಗ್ಲೆಂಡ್‌ನ ಪ್ರತಿಷ್ಠಿತ ಡರ್ಹಾಮ್ ವಿಶ್ವವಿದ್ಯಾಲಯದ ಪಿಜಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

ಆದಿತ್ಯ ಲಾಥರ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕ ಸಂಜಯ್ ಲಾಥರ್ ಮಾತನಾಡಿ, 40 ಸಾವಿರ ಮತದಾರರನ್ನು ಹೊಂದಿರುವ ಡರ್ಹಾಮ್ ವಿಶ್ವವಿದ್ಯಾಲಯವು, 20 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳನ್ನು ಹೊಂದಿದೆ. ಈ ವಿಶ್ವವಿದ್ಯಾನಿಲಯದ ಸ್ಟೂಡೆಂಟ್ ಯೂನಿಯನ್ ಚುನಾವಣೆಯಲ್ಲಿ ಆದಿತ್ಯ ಲಾಥರ್ ನೂತನ ಪಿಜಿ ಶೈಕ್ಷಣಿಕ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಇಂಡಿಯನ್ ಸೊಸೈಟಿ ಆಫ್ ಸ್ಟೂಡೆಂಟ್ಸ್ ಯೂನಿಯನ್‌ನ ಮಾಜಿ ಅಧ್ಯಕ್ಷ ಮತ್ತು ಮಾಜಿ NUS ಪ್ರತಿನಿಧಿ ಆದಿತ್ಯ ಲಾಥರ್ ಅವರು ಈ ಬಾರಿ ಲೇಬರ್ ಪಾರ್ಟಿಯ ಪರವಾಗಿ ಡರ್ಹಾಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಜಯಗಳಿಸಿದರೂ ನಾಲ್ಕನೇ ಪ್ರಾಶಸ್ತ್ಯದ ಮತಗಳಲ್ಲಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಆದಿತ್ಯ ಲಾಥರ್ ಅವರ ತಂದೆ ಡಾ. ಸಂಜಯ್ ಲಾಥರ್ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಎಸ್ಪಿಯ ಮಾಜಿ ನಾಯಕರಾಗಿದ್ದರು.

SCROLL FOR NEXT