ವಿದೇಶ

ಗಂಟೆಗಳ ಕಾಲ Instagram ಸ್ಥಗಿತ: ದೋಷವನ್ನು ಸರಿಪಡಿಸಿದ ನಂತರ ಕ್ಷಮೆಯಾಚಿಸಿದ ಸಂಸ್ಥೆ!

Vishwanath S

ಸ್ಯಾನ್ ಫ್ರಾನ್ಸಿಸ್ಕೋ: ತಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಬಳಕೆದಾರರು ದೂರಿದ ನಂತರ ಎಚ್ಚೆತ್ತ ಇನ್ ಸ್ಟಾಗ್ರಾಂ ಇದೀಗ ದೋಷವನ್ನು ಸರಿಪಡಿಸಿದೆ. ಇನ್ನು ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ ಕ್ಷಮೆಯಾಚಿಸಿದೆ. 

ಇನ್ ಸ್ಟಾಗ್ರಾಂ ಬಳಕೆದಾರರು ಖಾತೆಗಳ ಅಮಾನತು ದೋಷದಿಂದಾಗಿ ಸಂಭವಿಸುತ್ತಿದೆ. ಇದೀಗ ಇದನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ ಎಂದು ಕಂಪನಿ ಖಚಿತಪಡಿಸಿದೆ. ಇನ್ನು ಬಳಕೆದಾರರು ಈಗ ತಮ್ಮ ಖಾತೆಯನ್ನು ಅನಾಯಾಸವಾಗಿ ಬಳಸಬಹುದು ಎಂದು ಸಂಸ್ಥೆ ಟ್ವೀಟ್ ಮಾಡಿದೆ. 

ನಿನ್ನೆ ರಾತ್ರಿ 8 ಗಂಟೆಯಿಂದ ಸುಮಾರು 7,000ಕ್ಕೂ ಹೆಚ್ಚು ಬಳಕೆದಾರರು ಈ ದೋಷದ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ನಂತರ ದೋಷದ ಬಗ್ಗೆ ತಿಳಿದುಕೊಂಡಿದ್ದು, ಅದನ್ನು ಸರಿಪಡಿಸುವ ಕೆಲಸ ಆರಂಭವಾಗಿದ್ದು ಇಂದು ಮುಂಜಾನೆ 3.30ಕ್ಕೆ ಟ್ವೀಟ್ ಮಾಡುವ ಮೂಲಕ ಕಂಪನಿಯು ಈ ದೋಷವನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದೆ.

ಸಮಸ್ಯೆ ಆಂತರಿಕ ಸಮಸ್ಯೆಯೇ ಅಥವಾ ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು ಅಕ್ಟೋಬರ್ 25ರಂದು ಪ್ರಪಂಚದಾದ್ಯಂತದ ಜನರು ಸುಮಾರು ಎರಡು ಗಂಟೆಗಳ ಕಾಲ ಚಾಟ್ ಅಪ್ಲಿಕೇಶನ್ WhatsApp ನಲ್ಲಿ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಮಸ್ಯೆ ಕುರಿತು ವರದಿಯಾಗಿತ್ತು.

SCROLL FOR NEXT