ವಿದೇಶ

ಮ್ಯಾನ್ಮಾರ್: ವಿಮಾನಕ್ಕೆ ಹಾರಿದ ಬುಲೆಟ್, ಪ್ರಯಾಣಿಕನಿಗೆ ಗಾಯ

Vishwanath S

ಮಯನ್ಮಾರ್: ನೆಲದಿಂದ ಹಾರಿಸಿದ ಬುಲೆಟ್ ಗಾಳಿಯ ಮಧ್ಯದಲ್ಲಿ ವಿಮಾನಕ್ಕೆ ಬಡಿದಿದ್ದು ವಿಮಾನ ಪ್ರಯಾಣಿಕರೊಬ್ಬರು ಗಾಯಗೊಂಡಿರೋ ಘಟನೆ ನಡೆದಿದೆ.

ಮ್ಯಾನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಮ್ಯಾನ್ಮಾರ್‌ನ ಲೊಯ್ಕಾವ್ ತಲುಪಲು ಹೊರಟಿದ್ದರು.   ಕ್ಯಾಬಿನ್ ಕ್ರೂ ಹಂಚಿಕೊಂಡಿರುವ ಫೋಟೋಗಳಲ್ಲಿ ವಿಮಾನದೊಳಕ್ಕೆ ತೂರಿ ಬಂದಿರುವ ಗುಂಡು ಪ್ರಯಾಣಿಕನ  ಕುತ್ತಿಗೆ ಮತ್ತು ಕೆನ್ನೆಯ ಬಲಭಾಗ ಗಾಯಗಳನ್ನ ಮಾಡಿದ್ದು ರಕ್ತ ಸೋರಿದೆ.

ಸುದ್ದಿ ಸಂಸ್ಥೆ ಮ್ಯಾನ್ಮಾರ್ ನೌ ಪ್ರಕಾರ, 63 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ATR-72 ವಿಮಾನ 3,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ್ದಾಗ ಗುಂಡು ತೂರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ವ್ಯಕ್ತಿಯ ಮುಖದ ಬಲಭಾಗಕ್ಕೆ ಗಾಯವಾಗಿದೆ. ನೈಪಿಟಾವ್‌ನಿಂದ ಲೊಯ್ಕಾವ್‌ಗೆ ಪ್ರಯಾಣಿಸುತ್ತಿದ್ದ ಗಾಯಗೊಂಡ 27 ವರ್ಷದ ವ್ಯಕ್ತಿಯನ್ನ ವಿಮಾನ ಲ್ಯಾಂಡಿಂಗ್ ಆದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಪ್ರಯಾಣಿಕರಿಗೆ ಹೊಡೆಯುವ ಮೊದಲು ಬುಲೆಟ್ ವಿಮಾನವನ್ನು ಭೇದಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಲೊಯಿಕಾವ್‌ನಲ್ಲಿರುವ ಮಯನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ಕಚೇರಿಯು ನಗರಕ್ಕೆ ಎಲ್ಲಾ ವಿಮಾನಗಳನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗಿದೆ ಎಂದು ಘೋಷಿಸಿತು.

ದಿ ಮಿರರ್‌ನ ವರದಿಯ ಪ್ರಕಾರ ಮ್ಯಾನ್ಮಾರ್ ಸರ್ಕಾರವು ಕಯಾಹ್ ರಾಜ್ಯದಲ್ಲಿ ಬಂಡುಕೋರ ಪಡೆಗಳು ವಿಮಾನದ ಮೇಲೆ ಗುಂಡು ಹಾರಿಸಿದೆ ಎಂದು ಆರೋಪಿಸಿದೆ. ಆದಾಗ್ಯೂ ಬಂಡಾಯ ಗುಂಪುಗಳು ಆರೋಪವನ್ನು ನಿರಾಕರಿಸಿದವು. ಆಂಗ್ ಸಾನ್ ಸೂಕಿಯ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸುವ ಮೂಲಕ ಕಳೆದ ವರ್ಷ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಯಾಹ್ ಜುಂಟಾ ಮತ್ತು ಸ್ಥಳೀಯ ಪ್ರತಿರೋಧ ಗುಂಪುಗಳ ನಡುವೆ ಪ್ರಮುಖ ಸಂಘರ್ಷವನ್ನು ಕಂಡಿದೆ.

SCROLL FOR NEXT