ವಿದೇಶ

ಭೌತಶಾಸ್ತ್ರದಲ್ಲಿ 3 ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ 

Srinivas Rao BV

ನವದೆಹಲಿ: ಈ ವರ್ಷ ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಅಲೈನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ವಿಜ್ಞಾನಿಗಳಾಗಿದ್ದು, ಕ್ವಾಂಟಮ್ ಮಾಹಿತಿ ವಿಜ್ಞಾನದ ಪ್ರವರ್ತಕರಾಗಿದ್ದಕ್ಕಾಗಿ ಹಾಗೂ ಎಂಟಾಂಗಲ್ಡ್ ಫೋಟಾನ್ ಗಳೊಂದಿಗಿನ ಪ್ರಯೋಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಗುರುತಿಸಿ ನೋಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 

ರಾಯಲ್ ಸ್ವೀಡಿಷ್ ಅಕಾಡೆಮಿ ಸ್ಟಾಕ್‌ಹೋಮ್‌ನಲ್ಲಿರುವ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಘೋಷಿಸಲಾಗಿದೆ.

ಕಳೆದ ವರ್ಷ ಪ್ರಶಸ್ತಿಯನ್ನು ಸ್ಯುಕುರೊ ಮನಬೆ, ಕ್ಲಾಸ್ ಹ್ಯಾಸೆಲ್‌ಮನ್ ಮತ್ತು ಜಾರ್ಜಿಯೊ ಪ್ಯಾರಿಸಿ ಎಂಬ ವಿಜ್ಞಾನಿಗಳು ಪಡೆದಿದ್ದರು. ಪ್ರಕೃತಿಯ ಸಂಕೀರ್ಣ ಶಕ್ತಿಗಳನ್ನು ವಿವರಿಸಿ ಮತ್ತು ಊಹಿಸುವುದಕ್ಕೆ ಆ ಮೂಲಕ ಹವಾಮಾನ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿದ್ದರಿಂದ ಅವರಿಗೆ ನೋಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.
 
ವೈದ್ಯಕೀಯ ಕ್ಷೇತ್ರದಲ್ಲಿ ಸೋಮವಾರದಂದು  ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಬುಧವಾರದಂದು ರಸಾಯನಶಾಸ್ತ್ರ ಹಾಗೂ ಬುಧವಾರ ಸಾಹಿತ್ಯ, ಶುಕ್ರವಾರದಂದು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅ.10 ರಂದು ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.

SCROLL FOR NEXT