ವಿದೇಶ

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

Srinivas Rao BV

ನವದೆಹಲಿ: 2022 ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಫ್ರೆಂಚ್ ನ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಭಾಜನರಾಗಿದ್ದಾರೆ.

82 ವರ್ಷದ ಅನ್ನಿ ಎರ್ನಾಕ್ಸ್, 30 ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಎರ್ನಾಕ್ಸ್ ಲಿಂಗ, ಭಾಷೆ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಬಲವಾದ ಅಸಮಾನತೆಗಳಿಂದ ಗುರುತಿಸಲಾದ ಜೀವನವನ್ನು ಸ್ಥಿರವಾಗಿ ಮತ್ತು ವಿವಿಧ ಕೋನಗಳಿಂದ ಶೋಧಿಸುತ್ತಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ನೊಬೆಲ್ ಸಾಹಿತ್ಯ ವಿಭಾಗದ ವಿಜೇತರನ್ನು ಅ.06 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಘೋಷಿಸಿದರು. 

ಎರ್ನಾಕ್ಸ್ ತಮ್ಮ ಬರವಣಿಗೆ ಮೂಲಕ ಸಾಮಾಜಿಕ ಅಸಮಾನತೆಯ ಬಗ್ಗೆ ನಮ್ಮ ಕಣ್ಣುಗಳನ್ನು ತೆರೆಸುತ್ತಾರೆ ಎಂದು ನೋಬೆಲ್ ಸಮಿತಿ ಪ್ರಶಂಸೆ ವ್ಯಕ್ತಪಡಿಸಿದೆ. ಸ್ವೀಡಿಷ್ ಅಕಾಡೆಮಿಯಿಂದ ನೀಡಲಾಗುವ ಈ ಪ್ರಶಸ್ತಿ 10 ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ($914,704) ಮೌಲ್ಯ ಹೊಂದಿದೆ.

SCROLL FOR NEXT