ವಿದೇಶ

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ: ಕನಿಷ್ಠ 28 ಮಕ್ಕಳ ಹತ್ಯೆ, ನೂರಾರು ಮಂದಿ ಜೈಲುಪಾಲು!

Vishwanath S

ನಿಕೋಸಿಯಾ(ಸೈಪ್ರಸ್): ಮಹ್ಸಾ ಅಮಿನಿಯ ಸಾವಿನ ನಂತರ ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 28 ಮಕ್ಕಳು ಸಾವನ್ನಪ್ಪಿದ್ದಾರೆ. ನೂರಾರು ಯುವಕರು ಜೈಲುಪಾಲಾಗಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ತಿಳಿಸಿದೆ. 

ಇರಾನ್ ಇಸ್ಲಾಮಿಕ್ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಕುಖ್ಯಾತ ನೈತಿಕ ಪೊಲೀಸರು ಮಹ್ಸಾ ಅಮಿನಿಯನ್ನು ಬಂಧಿಸಿದ್ದರು. ಬಂಧನದ ನಂತರ 22 ವರ್ಷದ ಅಮಿನಿ ತೀವ್ರ ಅಸ್ವಸ್ಥರಾಗಿದ್ದು ಮೃತಪಟ್ಟಿದ್ದರು. ಅಮಿನಿ ಸಾವು ಇರಾನ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಇನ್ನು ಹಿಜಾಬ್ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು ನೂರಾರು ಯುವತಿಯರು ಸಾರ್ವಜನಿಕವಾಗಿ ಹಿಜಾಬ್ ಗಳನ್ನು ಸುಟ್ಟರು. ಇನ್ನು ಹಲವು ಮಹಿಳೆಯರು ತಮ್ಮ ತಲೆಕೂದಲನ್ನು ಕತ್ತರಿಸಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. 

ಕಳೆದ ಕೆಲ ವಾರಗಳಿಂದ ಇರಾನ್ ನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಈ ವೇಳೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇನ್ನು 28 ಮಂದಿ ಪ್ರತಿಭಟನೆ ವೇಳೆ ಮೃತಪಟ್ಟಿದ್ದಾರೆ ಎಂದು ದೇಶದ ಒಳಗೆ ಮತ್ತು ಹೊರಗಿನ ಮಾನವ ಹಕ್ಕುಗಳ ಗುಂಪು ಮಾಹಿತಿ ನೀಡಿದೆ. 

ಶಾಲೆಗಳಲ್ಲಿ ಮತ್ತು ರಸ್ತೆಯಲ್ಲಿ ಪ್ರತಿಭಟಿಸಿದ ಮಕ್ಕಳ ವಿರುದ್ಧ ಭದ್ರತಾ ಪಡೆಗಳು ಹಿಂಸಾಚಾರ ನಡೆಸುತ್ತಿರುವುದನ್ನು ಇರಾನ್‌ನ ಮಕ್ಕಳ ಹಕ್ಕುಗಳ ಸಂರಕ್ಷಣಾ ಸೊಸೈಟಿಯು ಖಂಡಿಸಿದೆ.

'ಅಂಕಿಅಂಶಗಳ ಪ್ರಕಾರ, ಈ ಘರ್ಷಣೆಗಳಲ್ಲಿ 28 ಮಕ್ಕಳು ಹತ್ಯೆಯಾಗಿದ್ದಾರೆ. ಹೆಚ್ಚಾಗಿ ಸಿಸ್ತಾನ್-ಬಲೂಚಿಸ್ತಾನದ ಹಿಂದುಳಿದ ಪ್ರಾಂತ್ಯದಲ್ಲಿ ಸಂಭವಿಸಿವೆ ಎಂದು ಟೆಹ್ರಾನ್ ಮೂಲದ ಗುಂಪು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರವು 'ಜವಾಬ್ದಾರರಾಗಿರಬೇಕು'. ಯಾರಾದರೂ, ಯಾವುದೇ ಶ್ರೇಣಿಯ, ಮಕ್ಕಳ ಮೇಲಿನ ಹಿಂಸೆ ಅಥವಾ ಕಿರುಕುಳ ಅಥವಾ ಅವರ ಸಾವಿಗೆ ಕಾರಣರಾದವರನ್ನು ಮುಂದೆ ತಂದು ಶಿಕ್ಷಿಸಬೇಕು ಎಂದು ಗುಂಪು ಹೇಳಿದೆ.

ಲಂಡನ್ ಮೂಲದ ಇರಾನ್ ವೈರ್ ನ್ಯೂಸ್ ವೆಬ್‌ಸೈಟ್‌ನಲ್ಲಿ ಬುಧವಾರ ಪೋಸ್ಟ್ ಮಾಡಿದ ವರದಿಯಲ್ಲಿ 'ಇದು ತುಂಬಾ ಕಳವಳಕಾರಿಯಾಗಿದೆ' ಎಂದು ಹೇಳಿದೆ. '18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಅಪರಾಧಿಯೊಂದಿಗೆ ಎಂದಿಗೂ ಬಂಧಿಸಬಾರದು. ಇದು ಕಾನೂನು ಅವಶ್ಯಕತೆಯಾಗಿದೆ, ಶಿಫಾರಸು ಅಲ್ಲ ಎಂದು ಹೇಳಿದೆ.

SCROLL FOR NEXT