ವಿದೇಶ

ವಿಶ್ವಸಂಸ್ಥೆ: ಪಾಕ್ ಭಯೋತ್ಪಾದಕರ ಕಪ್ಪು ಪಟ್ಟಿಗೆ ಸೇರಿಸುವ ಭಾರತ-ಅಮೆರಿಕ ನಡೆಗೆ ಮತ್ತೆ ಚೀನಾ ತಡೆ!

Srinivasamurthy VN

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಅಂತಾರಾಷ್ಟ್ರೀಯ ಕಪ್ಪು ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕ ರಾಷ್ಟ್ರಗಳ ಪ್ರಯತ್ನಕ್ಕೆ ಮತ್ತೆ ಚೀನಾ ದೇಶ ತಡೆಹಾಕಿದೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ನಾಯಕ ಶಾಹಿದ್ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿದೆ, ಈ ಹಿಂದಿನ ಪ್ರಯತ್ನ ನಡೆದ ಹಲವು ತಿಂಗಳುಗಳಲ್ಲಿ ಚೀನಾ ನಾಲ್ಕನೇ ಬಾರಿಗೆ ಭಾರತ ಮತ್ತು ಅಮೆರಿಕ ಪ್ರಯತ್ನಕ್ಕೆ ತಡೆಹಾಕಿದೆ.

ವಿಶ್ವಸಂಸ್ಥೆ ಭದ್ರತಾ ಸಮಿತಿಯ 1267 ರ ಅಲ್ ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸುವ ಭಾರತ ಮತ್ತು ಯುಎಸ್ ಪ್ರಸ್ತಾಪವನ್ನು ಚೀನಾ ತಡೆಹಿಡಿದಿದೆ ಎಂದು ತಿಳಿದುಬಂದಿದೆ. 1267 ರ ಅಲ್ ಖೈದಾ ನಿರ್ಬಂಧಗಳ ಸಮಿತಿಯ ಆಡಳಿತದ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗೊತ್ತುಪಡಿಸುವ ಪ್ರಸ್ತಾಪಗಳನ್ನು ಪಟ್ಟಿ ಮಾಡುವುದನ್ನು ಚೀನಾ ತಡೆಹಿಡಿದಿರುವುದು ಇದು ನಾಲ್ಕನೇ ಬಾರಿ ಎಂದು ಭಾರತದ ರಾಯಭಾರಿ ಹೇಳಿದ್ದಾರೆ.

2016ರ ಡಿಸೆಂಬರ್‌ನಲ್ಲಿ ಅಮೆರಿಕದ ಖಜಾನೆ ಇಲಾಖೆ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಈತ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್‌ನ ಆಪ್ತನಾಗಿದ್ದಾನೆ. 

SCROLL FOR NEXT