ವಿದೇಶ

ಈಗ ಮೆಕ್ಸಿಕೊದ ಎಲ್ಲಾ ರಾಜ್ಯಗಳಲ್ಲೂ ಸಲಿಂಗ ವಿವಾಹ ಕಾನೂನುಬದ್ಧ

Lingaraj Badiger

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಗಡಿ ರಾಜ್ಯವಾದ ತಮೌಲಿಪಾಸ್‌ ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡಿದೆ. ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ಪರವಾಗಿ ಶಾಸಕರು ಬುಧವಾರ ರಾತ್ರಿ ಮತ ಚಲಾಯಿಸಿದರು. ಇದರೊಂದಿಗೆ ಮೆಕ್ಸಿಕೊದ ಎಲ್ಲಾ 32 ರಾಜ್ಯಗಳಲ್ಲೂ ಸಲಿಂಗ ವಿವಾಹ ಕಾನೂನುಬದ್ಧವಾಗಿದೆ.

ರಾಜ್ಯದ ಸಿವಿಲ್ ಕೋಡ್ ಅನ್ನು ತಿದ್ದುಪಡಿ ಮಾಡುವ ಕ್ರಮದ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 12 ಮತಗಳು ಚಲಾವಣೆಯಾದವು. ಇಬ್ಬರು ಗೈರು ಹಾಜರಿಯೊಂದಿಗೆ ಕಾಯ್ದೆ ಅಂಗೀಕರಿಸಲ್ಪಟ್ಟಿತು.

ದೇಶದ ಸುಪ್ರೀಂ ಕೋರ್ಟ್‌ನ ಅಧ್ಯಕ್ಷ ಆರ್ಟುರೊ ಝಲ್ಡಿವರ್ ಅವರು ಸಲಿಂಗ ವಿವಾಹ ಅಂಗೀಕರಿಸಿದ  ತಮೌಲಿಪಾಸ್‌ ರಾಜ್ಯದ ನಿರ್ಧಾವನ್ನು ಸ್ವಾಗತಿಸಿದರು. “ಇಡೀ ದೇಶ ಬೃಹತ್ ಕಾಮನಬಿಲ್ಲಿನಿಂದ ಹೊಳೆಯುತ್ತದೆ. ಎಲ್ಲಾ ಜನರು ಘನತೆ ಮತ್ತು ಹಕ್ಕುಗಳೊಂದಿಗೆ ಜೀವಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕು ಒಂದು ದಿನ ಮುಂಚೆ ದಕ್ಷಿಣ ರಾಜ್ಯವಾದ ಗೆರೆರೊದ ಶಾಸಕರು ಸಲಿಂಗ ವಿವಾಹ ಅನುಮತಿಸುವ ಇದೇ ರೀತಿಯ ಕಾನೂನನ್ನು ಅಂಗೀಕರಿಸಿದ್ದರು.

SCROLL FOR NEXT