ವಿದೇಶ

ಯೋಧನಿಂದ ಅಲ್ ಜಜೀರಾ ಪತ್ರಕರ್ತೆಯ ಮೇಲೆ ಗುಂಡಿನ ದಾಳಿ ಸಾಧ್ಯತೆ ಒಪ್ಪಿಕೊಂಡ ಇಸ್ರೇಲ್ 

Srinivas Rao BV

ಜೆರುಸಲೇಮ್: ಅಲ್ ಜಜೀರಾ ಪತ್ರಕರ್ತೆಯ ಮೇಲೆ ತನ್ನ ಯೋಧರು ಗುಂಡಿನ ದಾಳಿ ನಡೆಸಿರುವ ಸಾಧ್ಯತೆಯನ್ನು ಇಸ್ರೇಲ್ ಸೇನೆ ಒಪ್ಪಿಕೊಂಡಿದೆ. 

ಪ್ಯಾಲೆಸ್ಟೇನಿಯನ್- ಅಮೇರಿಕನ್ ವರದಿಗಾರ್ತಿ ಶಿರೀನ್ ಅಬು ಅಕ್ಲೇಹ್ ಎಂಬುವವರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು. ಆಕೆಯನ್ನು ಭಯೋತ್ಪಾದಕಿ ಎಂದು ತಪ್ಪು ಭಾವಿಸಿ ಇಸ್ರೇಲ್ ಸೇನೆ ಗುಂಡಿಕ್ಕಿರಬಹುದು ಎಂದು ಇಸ್ರೇಲಿ ಸೇನೆ ಹೇಳಿದೆ. 

ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ಅಬು ಅಕ್ಲೇಹ್ ಅವರನ್ನು ಪ್ಯಾಲಿಸ್ತೇನಿಯನ್ ಗನ್ ಮ್ಯಾನ್ ಎಂದು ಭಾವಿಸಿ ಆಕಸ್ಮಿಕವಾಗಿ ಅವರತ್ತ ಗುಂಡು ಹಾರಿಸಿರುವ ಸಾಧ್ಯತೆ ಇದೆ ಎಂದು ಮೇ.11 ರಂದು ನಡೆದಿದ್ದ ಘಟನೆಯ ಬಗ್ಗೆ ತನ್ನ ಅಂತಿಮ ವರದಿ ಸಲ್ಲಿಸಿದೆ.
 

SCROLL FOR NEXT