ಲಂಡನ್ ಗೆ ತೆರಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು 
ವಿದೇಶ

ಎಲಿಜಬೆತ್ ಅಂತ್ಯಕ್ರಿಯೆ ಹಿನ್ನೆಲೆ: ಲಂಡನ್ ಗೆ ತೆರಳಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸೆಪ್ಟೆಂಬರ್ 19ರಂದು ನಡೆಯಲಿರುವ ಬ್ರಿಟನ್​ ರಾಣಿ ಎರಡನೇ ಎಲಿಜಬೆತ್​ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಗ್ಲೆಂಡ್​ಗೆ ತೆರಳಿದ್ದಾರೆ.

ನವದೆಹಲಿ: ಸೆಪ್ಟೆಂಬರ್ 19ರಂದು ನಡೆಯಲಿರುವ ಬ್ರಿಟನ್​ ರಾಣಿ ಎರಡನೇ ಎಲಿಜಬೆತ್​ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಗ್ಲೆಂಡ್​ಗೆ ತೆರಳಿದ್ದಾರೆ.

ಭಾನುವಾರ ಮುಂಜಾನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್ ಗೆ ಆಗಮಿಸಿದ್ದು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ. ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬಳಿಕ ಮುರ್ಮು ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರುವ ಎಲ್ಲ ದೇಶಗಳ ಗಣ್ಯರು ಸರ್ಕಾರಿ ವಿಮಾನದ ಬದಲಾಗಿ ಖಾಸಗಿ ವಿಧಾನದಲ್ಲಿ ಬರಲು ಬ್ರಿಟನ್​ ಅರಮನೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ದ್ರೌಪದಿ ಮುರ್ಮು ಅವರು ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್​ಗೆ ತೆರಳಿದ್ದಾರೆ. 

ಬ್ರಿಟನ್ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಎರಡನೇ ಎಲಿಜಬೆತ್ ರಾಣಿ 96ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಸೆಪ್ಟೆಂಬರ್​ 8 ರಂದು ನಿಧನರಾಗಿದ್ದರು. ಸೆಪ್ಟೆಂಬರ್​ 19 ರಂದು ಬ್ರಿಟನ್ ರಾಣಿ ಎರಡನೇ ಎಲಿಜಬೆತ್​ ಅವರ ಅಂತ್ಯಕ್ರಿಯೆ ಸೆಂಟ್ರಲ್ ಲಂಡನ್​ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ. 

ರಾಣಿಯ ಶವಪೆಟ್ಟಿಗೆಯನ್ನು ವಿಂಡ್ಸರ್ ಕ್ಯಾಸಲ್‌ಗೆ ಕೊಂಡೊಯ್ಯುವ ಮೂಲಕ 6ನೇ ಕಿಂಗ್ ಜಾರ್ಜ್ ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಅವರ ತಂದೆ 5ನೇ ಜಾರ್ಜ್ ಅವರ ಸಮಾಧಿಯ ಪಕ್ಕದಲ್ಲಿ ರಾಣಿ ಸಮಾಧಿ ಮಾಡಲು ನಿರ್ಧರಿಸಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್