ವಿದೇಶ

ಬಿಂದ್ರನ್ ವಾಲೆ ರೀತಿ ಕಾಣಲು ಜಾರ್ಜಿಯಾದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಖಲೀಸ್ಥಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್!

Srinivas Rao BV

ನವದೆಹಲಿ: ಖಲೀಸ್ಥಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್, 2022 ರಲ್ಲಿ ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಖಲಿಸ್ಥಾನಿ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಅವನಂತೆ ಕಾಣಲು ಜಾರ್ಜಿಯಾದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಎಂಬ ಮಾಹಿತಿ ಗುಪ್ತಚರ ಇಲಾಖೆ ತಿಳಿಸಿದೆ.

ಅಸ್ಸಾಂ ನ ದಿಬ್ರುಘರ್ ಜೈಲ್ ನಲ್ಲಿರುವ ಅಮೃತ್ ಪಾಲ್ ಸಿಂಗ್ ಅವರ ಆಪ್ತರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಮೃತ್ ಪಾಲ್ ಸಿಂಗ್ ಶಸ್ತ್ರಚಿಕಿತ್ಸೆಗಾಗಿ ಜಾರ್ಜಿಯಾದಲ್ಲಿ 2 ವರ್ಷಗಳ ಕಾಲ ಇದ್ದ. ಅಮೃತ್ ಪಾಲ್ ಸಿಂಗ್ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಎಂಬ ಮಾಹಿತಿಯನ್ನು ಆಪ್ತರು ಬಹಿರಂಗಪಡಿಸಿದ್ದಾರೆ.

ವಾರೀಸ್ ಪಂಜಾಬ್ ದೇ ಮೇಲಿನ ದಾಳಿಯ ಬಳಿಕ ಅಮೃತ್ ಪಾಲ್ ಸಿಂಗ್ ತಲೆಮರೆಸಿಕೊಂಡಿದ್ದು, ಕಳೆದ ಕೆಲವು ದಿನಗಳಲ್ಲಿ ಆತನ 2 ವೀಡಿಯೋಗಳು ಹಾಗೂ ಒಂದು ಆಡಿಯೋ ಕ್ಲಿಪ್ ಗಳು ಹೊರಬಂದಿವೆ.

SCROLL FOR NEXT