ಚೀನಾ ಸೇನೆ ಸಮರಾಭ್ಯಾಸ 
ವಿದೇಶ

ಜೀವಂತ ಮದ್ದು-ಗುಂಡುಗಳ ಸಹಿತ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ

ಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.

ತೈಪೆ: ಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.

ತೈವಾನ್ ಅನ್ನು ಸುತ್ತುವರಿದು ಮಿಲಿಟರಿ ಕವಾಯತು ಆರಂಭಿಸಿರುವ ಚೀನಾ, ಎರಡನೇ ದಿನವಾದ ಭಾನುವಾರ ಕೂಡ ತೈವಾನ್ ಮೇಲಿನ ಅಣಕುದಾಳಿಯ ಮೂಲಕ ಸಮರಾಭ್ಯಾಸ ಮುಂದುವರಿಸಿದೆ. ಚೀನಾದ ಉಗ್ರ ಸಮರಾಭ್ಯಾಸಕ್ಕೆ ತೈವಾನ್ನಿಂದ  ಖಂಡನೆ ವ್ಯಕ್ತವಾಗಿದ್ದರೆ ಚೀನಾದ ಚಟುವಟಿಕೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಆದರೆ ಮೂರು ದಿನಗಳ ಸಮರಾಭ್ಯಾಸ ಪೂರ್ವನಿಗದಿತ ರೀತಿಯಲ್ಲಿಯೇ ಮುಂದುವರಿಯಲಿದೆ ಎಂದು ಚೀನಾದ ಸೇನೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದೆ.

ದ್ವೀಪದ ಸುತ್ತ ಚೀನಾದ 11 ಸಮರನೌಕೆಗಳು ಹಾಗೂ 70 ಯುದ್ಧವಿಮಾನಗಳನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ನ ರಕ್ಷಣಾ ಸಚಿವಾಲಯ ಹೇಳಿದೆ. ಎರಡನೇ ದಿನದ ಸಮರಾಭ್ಯಾಸದಲ್ಲಿ ತೈವಾನ್ ಜಲಸಂಧಿಯಲ್ಲಿ ತೈವಾನ್ ದ್ವೀಪ ಮತ್ತು ಸುತ್ತಮುತ್ತಲಿನ ಸಾಗರದಲ್ಲಿನ ಪ್ರಮುಖ ಗುರಿಗಳ ಮೇಲೆ ಅಣಕು ದಾಳಿಯನ್ನು ನಡೆಸಿವೆ. ದ್ವೀಪವನ್ನು ನಿಕಟವಾಗಿ ಸುತ್ತುವರಿಯುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚೀನಾ ಸೇನೆ ಹೇಳಿದೆ. ಸೋಮವಾರದ ಸಮರಾಭ್ಯಾಸವು ತೈವಾನ್ನ ಮಾತ್ಸು ದ್ವೀಪದ ಸುಮಾರು 80 ಕಿ.ಮೀ ದೂರದಲ್ಲಿರುವ ಫುಜಿಯಾನ್ ಪ್ರಾಂತ್ಯದಲ್ಲಿ ನಡೆಯಲಿದೆ.

ಈ ಸಮರಾಭ್ಯಾಸವು ತೈವಾನ್ನ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿ ಶಕ್ತಿಗಳು ಮತ್ತು ಬಾಹ್ಯಶಕ್ತಿಗಳ ನಡುವಿನ ಒಪ್ಪಂದ ಹಾಗೂ ಅವರ ಪ್ರಚೋದನಕಾರಿ  ಚಟುವಟಿಕೆಗಳ ವಿರುದ್ಧ ಕಠಿಣ ಎಚ್ಚರಿಕೆಯಾಗಲಿದೆ ಎಂದು ಚೀನಾ ಸೇನೆಯ ವಕ್ತಾರ ಶಿ ಯಿನ್ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?