ಸುಡಾನ್ ಸಂಘರ್ಷ 
ವಿದೇಶ

ಅಮೆರಿಕ, ಸೌದಿ ಮಧ್ಯಸ್ಥಿಕೆ: ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮ ಘೋಷಣೆ

ಸುಡಾನ್ ನಲ್ಲಿ ಸಂಭವಿಸುತ್ತಿರುವ ಸಂಘರ್ಷದಿಂದ ನೂರಾರು ಪ್ರಜೆಗಳು ಸಾವನ್ನಪ್ಪಿರುವಂತೆಯೇ ಎರಡು ಸೇನಾಪಡೆಗಳು 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.

ಖಾರ್ಟೂಮ್‌: ಸುಡಾನ್ ನಲ್ಲಿ ಸಂಭವಿಸುತ್ತಿರುವ ಸಂಘರ್ಷದಿಂದ ನೂರಾರು ಪ್ರಜೆಗಳು ಸಾವನ್ನಪ್ಪಿರುವಂತೆಯೇ ಎರಡು ಸೇನಾಪಡೆಗಳು 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.

ಹೌದು.. ಸುಡಾನ್ ಸೇನೆ ಮತ್ತು ಪ್ಯಾರಾಮಿಲಿಟರಿ ಪಡೆಗಳ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ಹಿನ್ನಲೆಯಲ್ಲಿ ಉಭಯ ಪಡೆಗಳು ಮೂರು ದಿನಗಳ ಕದನ ವಿರಾಮ ಘೋಷಣೆಗೆ ಒಪ್ಪಿಗೆ ನೀಡಿವೆ. ಜನರಲ್‌ ಅಬ್ದೆಲ್‌ ಫಟ್ಟಾ ಬುರ್ಹಾನ್‌ ನೇತೃತ್ವದ ಸುಡಾನ್‌ ಸೇನೆ ಮತ್ತು ಜನರಲ್‌ ಮೊಹಮ್ಮದ್‌ ಹಮ್ದನ್‌ ದಗಲೊ ನೇತೃತ್ವದ ರ‍್ಯಾಪಿಡ್‌ ಸಪೋರ್ಟ್‌ ಫೋರ್ಸ್‌ (ಆರ್‌ಎಸ್‌ಎಫ್‌) ಪಡೆಗಳು ಜಂಟಿಯಾಗಿ ಕದನ ವಿರಾಮ ಘೋಷಿಸಿವೆ. ಇದಕ್ಕೆ ಸೌದಿ ಅರೇಬಿಯಾ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾನವೀಯತೆಯನ್ನು ಪಸರಿಸಲು, ಪ್ರಜೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳಲು, ಆರೋಗ್ಯ ಸುಧಾರಿಸಿಕೊಳ್ಳಲು, ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ರಾಜತಾಂತ್ರಿಕರ ಸ್ಥಳಾಂತರ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಈ ಕದನ ವಿರಾಮದ ಮುಖ್ಯ ಉದ್ದೇಶವಾಗಿದೆ ಎಂದು ಆರ್‌ಎಸ್‌ಎಫ್‌ ಹೇಳಿಕೆ ನೀಡಿದೆ. ಈ ಘೋಷಣೆಯಾದ ಕೂಡಲೇ ಗುಂಡಿನ ಶಬ್ದ, ಯುದ್ಧ ವಿಮಾನಗಳ ಹಾರಾಟ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಸುಡಾನ್ ಸಂಘರ್ಷದಲ್ಲಿ 291 ಸ್ಥಳೀಯರೂ ಸೇರಿದಂತೆ 420ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 3,700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಖಾರ್ಟೂಮ್‌ನಲ್ಲಿ ಸೇನಾಪಡೆ ಮೇಲುಗೈ ಸಾಧಿಸಿದಂತೆ ಕಂಡರೂ, ಓಮ್‌ಡುರ್‌ಮನ್‌ ಮತ್ತು ಕೆಲವು ಜಿಲ್ಲೆಗಳು ಆರ್‌ಎಸ್‌ಎಫ್‌ ಅಧೀನದಲ್ಲಿವೆ ಎಂದು ಹೇಳಲಾಗಿದೆ.

ಭರದಿಂದ ಸಾಗಿದ ತೆರವು ಕಾರ್ಯಾಚರಣೆ ಖಾರ್ಟೂಮ್‌(ಎಪಿ ಎಎಫ್‌ಪಿ): ಸುಡಾನ್‌ನಿಂದ ವಿವಿಧ ದೇಶಗಳ ನಾಗರಿಕರನ್ನು ವಿಮಾನ ಬಸ್‌ಗಳ ಮೂಲಕ ತೆರವು ಮಾಡುವ ಕೆಲಸ ಮಂಗಳವಾರವೂ ಭರದಿಂದ ಸಾಗಿತು. ಈಗಾಗಲೇ 2 ಸಾವಿರ ಬ್ರಿಟಿಷ್ ಪ್ರಜೆಗಳನ್ನು ಸುರಕ್ಷಿತವಾಗಿ ದೇಶದಿಂದ ಹೊರಗೆ ಕರೆದೊಯ್ಯಲಾಗಿದ್ದರೆ ಇನ್ನೂ 2 ಸಾವಿರ ಮಂದಿಯ ತೆರವು ಬಾಕಿ ಉಳಿದಿದೆ. 

ಭಾರತ ಕೂಡ ವಿಶೇಷ ಕಾರ್ಯಾಚರಣೆ ಮೂಲಕ ತನ್ನ ನಾಗರೀಕರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದೆ. ಭರದಿಂದ ಸಾಗಿದ ತೆರವು ಕಾರ್ಯಾಚರಣೆ ಖಾರ್ಟೂಮ್‌(ಎಪಿ ಎಎಫ್‌ಪಿ): ಸುಡಾನ್‌ನಿಂದ ವಿವಿಧ ದೇಶಗಳ ನಾಗರಿಕರನ್ನು ವಿಮಾನ ಬಸ್‌ಗಳ ಮೂಲಕ ತೆರವು ಮಾಡುವ ಕೆಲಸ ಮಂಗಳವಾರವೂ ಭರದಿಂದ ಸಾಗಿತು. ಈಗಾಗಲೇ 2 ಸಾವಿರ ಬ್ರಿಟಿಷ್ ಪ್ರಜೆಗಳನ್ನು ಸುರಕ್ಷಿತವಾಗಿ ದೇಶದಿಂದ ಹೊರಗೆ ಕರೆದೊಯ್ಯಲಾಗಿದ್ದರೆ ಇನ್ನೂ 2 ಸಾವಿರ ಮಂದಿಯ ತೆರವು ಬಾಕಿ ಉಳಿದಿದೆ. ಜರ್ಮನಿ ತನ್ನ 500 ಪ್ರಜೆಗಳ ತೆರವಿಗೆ ವಿಮಾನವನ್ನು ಕಳುಹಿಸಿಕೊಟ್ಟಿದೆ. ಕೀನ್ಯಾದ ಸೇನಾ ವಿಮಾನ ಸೋಮವಾರ ರಾತ್ರಿ ಸೊಮಾಲಿಯಾದ 19 ಮಂದಿ ಸೌದಿ ಅರೇಬಿಯಾದ ಒಬ್ಬ ಸಹಿತ 39 ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ. ಜಾರ್ಜಿಯಾ ಪೆರು ಸಹಿತ 138 ಜನರನ್ನು ರಕ್ಷಣೆ ಮಾಡಿರುವುದಾಗಿ ಉಕ್ರೇನ್‌ ತಿಳಿಸಿದೆ. 

ಫ್ರಾನ್ಸ್‌ನಿಂದ ಇತರ ದೇಶಗಳ 36 ಪ್ರಜೆಗಳ ಸಹಿತ 538 ಜನರ ರಕ್ಷಣೆ ಸಾಧ್ಯವಾಗಿದೆ.  ನೆದರ್ಲೆಂಡ್‌ ಜರ್ಮನಿ ಇಟಲಿ ಸ್ಪೇನ್‌ ಜೋರ್ಡಾನ್‌ ಹಾಗೂ ಗ್ರೀಸ್‌ ವಿಮಾನಗಳು ಸಹ ತೆರವು ಕಾರ್ಯಾಚರಣೆ ನಡೆಸಿವೆ. 20 ದೇಶಗಳ 200ಕ್ಕೂ ಹೆಚ್ಚು ಜನರು ಸೋಮವಾರ ರಾತ್ರಿ ಸೌದಿ ಬಂದರು ಜಿದ್ದಾಗೆ ತಲುಪಿದ್ದಾರೆ. ಖಾರ್ಟೂಮ್‌ನಿಂದ ಸುಡಾನ್‌ನ ಬಂದರಿಗೆ 10–11 ಗಂಟೆಗಳ ಪ್ರಯಾಣ ಮಾಡಿದೆವು. ಸುಡಾನ್‌ ಬಂದರಿನಿಂದ ಜಿದ್ದಾಗೆ ತಲುಪಲು ಹಡಗಿನಲ್ಲಿ 20 ಗಂಟೆಗಳ ಪ್ರಯಾಣ ಮಾಡಿದೆವು ಎಂದು ಲೆಬನಾನ್ ದೇಶದ ಪ್ರಜೆ ಸುಹೈಬ್‌ ಐಚ್‌ ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT