ಗಾಜಾದಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ 
ವಿದೇಶ

ಕದನ ವಿರಾಮ ಅವಧಿ ಮುಕ್ತಾಯ: ಗಾಜಾದಿಂದ ರಾಕೆಟ್ ದಾಳಿ ಬೆನ್ನಲ್ಲೇ ಹಮಾಸ್ ವಿರುದ್ಧ ಮುಗಿಬಿದ್ದ ಇಸ್ರೇಲ್ ಸೇನೆ

ಹಮಾಸ್ ಉಗ್ರಗಾಮಿ ಸಂಘಟನೆ ಜೊತೆಗಿನ ಒಂದು ದಿನದ ವಿಸ್ತರಿತ ಕದನ ವಿರಾಮ ಅವಧಿ ಮುಕ್ತಾಯದ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ಮುಗಿಬಿದಿದ್ದು, ಹಮಾಸ್ ಉಗ್ರರ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ಪುನಾರಂಭಿಸಿದೆ.

ಟೆಲ್ ಅವೀವ್: ಹಮಾಸ್ ಉಗ್ರಗಾಮಿ ಸಂಘಟನೆ ಜೊತೆಗಿನ ಒಂದು ದಿನದ ವಿಸ್ತರಿತ ಕದನ ವಿರಾಮ ಅವಧಿ ಮುಕ್ತಾಯದ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ಮುಗಿಬಿದಿದ್ದು, ಹಮಾಸ್ ಉಗ್ರರ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ಪುನಾರಂಭಿಸಿದೆ.

ಗಾಜಾದಿಂದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿದ್ದು, ಹೀಗಾಗಿ ತಾನೂ ಕೂಡ ಕದನ ವಿರಾಮ ಪೂರ್ಣಗೊಂಡ ಬಳಿಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪುನಾರಂಭಿಸಿರುವುದಾಗಿ ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ. ಕದನ ವಿರಾಮ ಒಪ್ಪಂದವನ್ನು ಹಮಾಸ್ ಸಂಘಟನೆ ಗೌರವಿಸಿಲ್ಲ. ಕದನ ವಿರಾಮ ಚಾಲ್ತಿಯಲ್ಲಿರುವಂತೆಯೇ ಹಮಾಸ್ ಉಗ್ರರು ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ. ಆದರೆ ನಮ್ಮ ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಅವುಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಅಲ್ಲದೆ ಗಾಜಾಪಟ್ಟಿಯಿಂದ ಇಸ್ರೇಲ್ ಸೇನೆಯತ್ತ ಗುಂಡಿನ ದಾಳಿ ಕೂಡ ನಡೆಯುತ್ತಿದ್ದು, ಇದಕ್ಕೆ ಸೇನಾಪಡೆಗಳು ದಿಟ್ಟ ಉತ್ತರ ನೀಡುತ್ತಿವೆ. ಗಾಜಾಪಟ್ಟಿಯಲ್ಲಿ ತಮ್ಮ ಸೇನಾ ಕಾರ್ಯಾಚರಣೆಯನ್ನು ಪುನಾರಂಭಿಸಿವೆ. ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಯುದ್ಧವನ್ನು ಪುನರಾರಂಭಿಸಿದೆ ಎಂದು ಇಸ್ರೇಲ್ ಹೇಳಿದೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗಾಜಾದ ಮಿಲಿಟರಿ ಗಡಿಯನ್ನು ಭೇದಿಸಿ ಒಳ ನುಗ್ಗಿ ನೂರಾರು ಇಸ್ರೇಲಿಗರನ್ನು ಕೊಂದ ಬಳಿಕ ಇಸ್ರೇಲ್ ಸೇನೆ ಗಾಜಾ ಮೇಲೆ ಯುದ್ಧ ಸಾರಿತ್ತು. ಅಲ್ಲದೆ ವೈಮಾನಿಕ ದಾಳಿ ಮಾಡಿ ನೂರಾರು ಕಟ್ಟಡಗಳನ್ನು ಧ್ವಂಸ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು. ಕತಾರ್ ಮಧ್ಯಸ್ಥಿಕೆ ವಹಿಸಿದ ಒಪ್ಪಂದದ ಸಮಯದಲ್ಲಿ, 240 ಪ್ಯಾಲೇಸ್ಟಿನಿಯನ್ ಕೈದಿಗಳಿಗೆ ಬದಲಾಗಿ 80 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಮಾತ್ರವಲ್ಲದೇ 20 ಕ್ಕೂ ಹೆಚ್ಚು ವಿದೇಶಿಯರು, ಅವರಲ್ಲಿ ಹೆಚ್ಚಿನವರು ಇಸ್ರೇಲ್‌ನಲ್ಲಿ ವಾಸಿಸುವ ಥಾಯ್ಲೆಂಡ್ ಮೂಲದವರನ್ನೂ ಬಿಡುಗಡೆ ಮಾಡಲಾಗಿತ್ತು. 

ಆರಂಭಿಕ ಒಪ್ಪಂದದ ಪ್ರಕಾರ, ಇಸ್ರೇಲ್ ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಾಲ್ಕು ದಿನಗಳವರೆಗೆ ನಿಲ್ಲಿಸಲು ಒಪ್ಪಿಕೊಂಡಿತು ಮತ್ತು ಗಾಜಾದಿಂದ ಬಿಡುಗಡೆಯಾದ 50 ಒತ್ತೆಯಾಳುಗಳಲ್ಲಿ ತಲಾ ಮೂರು ಪ್ಯಾಲೇಸ್ಟಿನಿಯನ್ ಭದ್ರತಾ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಒತ್ತಿಹೇಳಿತು.ಇದಲ್ಲದೆ, ಹಮಾಸ್ 17 ಥೈಸ್, ಒಬ್ಬ ಫಿಲಿಪೈನ್ಸ್ ಪ್ರಜೆ ಮತ್ತು ಒಬ್ಬ ಡ್ಯುಯಲ್ ರಷ್ಯನ್-ಇಸ್ರೇಲಿ ಪ್ರಜೆಗಳನ್ನು ಬಿಡುಗಡೆ ಮಾಡಿತು. ಆದಾಗ್ಯೂ, ಮಂಗಳವಾರ, ಇಸ್ರೇಲ್ ಮತ್ತು ಹಮಾಸ್ ತಾತ್ಕಾಲಿಕ ಕದನ ವಿರಾಮವನ್ನು ಎರಡು ದಿನಗಳವರೆಗೆ ವಿಸ್ತರಿಸಲು ಒಪ್ಪಿಕೊಂಡವು, ಭಯೋತ್ಪಾದಕ ಗುಂಪಿನಿಂದ ಒತ್ತೆಯಾಳಾಗಿದ್ದ ಇನ್ನೂ 20 ಜನರನ್ನು ಬಿಡುಗಡೆ ಮಾಡಲು ಇದು ಅನುವು ಮಾಡಿಕೊಟ್ಟಿತ್ತು.

ಇದೀಗ ಕದನ ವಿರಾಮ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಮತ್ತೆ ಇಸ್ರೇಲ್ ಸೇನೆ ತನ್ನ ದಾಳಿ ಪುನಾರಂಭಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT