ವಿದೇಶ

ನ್ಯೂಜಿಲೆಂಡ್‌ನಲ್ಲಿ ಭಾರತೀಯ ಮೂಲದ ರೇಡಿಯೊ ಜಾಕಿ ಹತ್ಯೆಗೆ ಸಂಚು: 3 ಖಲಿಸ್ತಾನ್ ಭಯೋತ್ಪಾದಕರಿಗೆ ಶಿಕ್ಷೆ

Vishwanath S

ಆಕ್ಲೆಂಡ್: ಜನಪ್ರಿಯ ಆಕ್ಲೆಂಡ್ ಮೂಲದ ರೇಡಿಯೊ ನಿರೂಪಕ ಹರ್ನೆಕ್ ಸಿಂಗ್ ಅವರ ಕೊಲೆ ಯತ್ನದಲ್ಲಿ ಮೂವರು ಖಲಿಸ್ತಾನ್ ಉಗ್ರರನ್ನು ದೋಷಿ ಎಂದು ಘೋಷಿಸಲಾದ್ದು ಶಿಕ್ಷೆ ವಿಧಿಸಲಾಗಿದೆ. 

ಹರ್ನೆಕ್ ಸಿಂಗ್ ಅವರು ಖಲಿಸ್ತಾನ್ ಸಿದ್ಧಾಂತದ ವಿರುದ್ಧ ದನಿಯೆತ್ತಿದ್ದಾರೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ. 27 ವರ್ಷದ ಸರ್ವಜೀತ್ ಸಿಧು ಕೊಲೆ ಯತ್ನದಲ್ಲಿ ತಪ್ಪಿತಸ್ಥನಾಗಿದ್ದರೆ, 44 ವರ್ಷದ ಸುಖ್‌ಪ್ರೀತ್ ಸಿಂಗ್ ಕೊಲೆ ಯತ್ನಕ್ಕೆ ನೆರವು ನೀಡಿದ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದೆ.

ಇನ್ನು ಮೂರನೇ ಅಪರಾಧಿ 48 ವರ್ಷದ ಆಕ್ಲೆಂಡ್ ನಿವಾಸಿ ಹೆಸರನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎಂದು ವರದಿಯಾಗಿದೆ. ಪ್ರತ್ಯೇಕತಾವಾದಿ ಆಂದೋಲನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಹರ್ನೆಕ್ ಸಿಂಗ್ ವಿರುದ್ಧ ಅಸಮಾಧಾನದಿಂದ ದಾಳಿಯನ್ನು ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಮಾರ್ಕ್ ವೂಲ್ಫೋರ್ಡ್ ಅವರು ಸಮುದಾಯ ಸುರಕ್ಷತೆ ಮತ್ತು ಧಾರ್ಮಿಕ ಮತಾಂಧತೆಯ ವಿರುದ್ಧ ಕಠಿಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು.

2020ರ ಡಿಸೆಂಬರ್ 23ರಂದು ಈ ದಾಳಿ ನಡೆದಿತ್ತು. ಹರ್ನೆಕ್ ಸಿಂಗ್ ರನ್ನು ಹತ್ಯೆ ಮಾಡಲು ಧಾರ್ಮಿಕ ಉಗ್ರಗಾಮಿಗಳ ಗುಂಪು ದಾರಿಯಲ್ಲಿ ಹೊಂಚು ಹಾಕಿ ಕುಳಿತಿತ್ತು. ನಂತರ ದಾಳಿ ಮಾಡಿ ಹರ್ನೇಕ್ ಸಿಂಗ್ ಗೆ 40ಕ್ಕೂ ಹೆಚ್ಚು ಬಾರಿ ಇರಿಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ 350ಕ್ಕೂ ಹೆಚ್ಚು ಹೊಲಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು ನಂತರ ಅವರು ಚೇತರಿಸಿಕೊಂಡಿದ್ದರು. ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಧೀಶ ವೂಲ್‌ಫೋರ್ಡ್, "ಈ ಪ್ರಕರಣದಲ್ಲಿ ಧಾರ್ಮಿಕ ಮತಾಂಧತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಶಿಕ್ಷೆಗೆ ವಿಭಿನ್ನ ವಿಧಾನದ ಅಗತ್ಯವಿದೆ. ಸಮಾಜವನ್ನು ಮತ್ತಷ್ಟು ಹಿಂಸೆಯಿಂದ ರಕ್ಷಿಸಲು ಮತ್ತು ಇತರ ಜನರನ್ನು ರಕ್ಷಿಸಲು ಒತ್ತು ನೀಡಬೇಕು ಎಂದು ಹೇಳಿದರು.

ಹರ್ನೆಕ್ ಸಿಂಗ್ ಅವರನ್ನು ನೆಕ್ಕಿ ಎಂದೂ ಕರೆಯುತ್ತಾರೆ. ಆತನ ಮೇಲೆ ದಾಳಿ ಮಾಡಲು ಜನರು ಮೂರು ಕಾರುಗಳಲ್ಲಿ ಬಂದಿದ್ದರು. ದಾಳಿಯ ಸಮಯದಲ್ಲಿ ಹಾರ್ನೆಕ್ ತನ್ನ ಕಾರನ್ನು ತಲುಪಿ ಅದನ್ನು ಲಾಕ್ ಮಾಡಿದ್ದಾನೆ. ಇದಾದ ಬಳಿಕ ಕಾರಿನ ಹಾರ್ನ್ ಬಾರಿಸಿ ಸಹಾಯಕ್ಕಾಗಿ ಜನರನ್ನು ಕರೆಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 23ರಂದು ಜಸ್ಪಾಲ್ ಸಿಂಗ್ ಗೆ ಕರೆ ಮಾಡಿ, 'ಕೆಲಸ ಮುಗಿದಿದೆ. ಅವನು ಇನ್ನು ಮುಂದೆ ರೇಡಿಯೊದಲ್ಲಿ ಬರುವುದಿಲ್ಲ ಎಂದು ಆರೋಪಿಗಳು ಹೇಳಿದ್ದರು.

ದಾಳಿಯ ಮಾಸ್ಟರ್ ಮೈಂಡ್ ಗೆ 13 ವರ್ಷ 6 ತಿಂಗಳು ಶಿಕ್ಷೆ
ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ 48 ವರ್ಷದ ಅಪರಾಧಿಗೆ ಹದಿಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸರ್ವಜಿತ್ ಸಿಧುಗೆ ಒಂಬತ್ತೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸುಖಪ್ರೀತ್ ಸಿಂಗ್ ಅವರಿಗೆ ಆರು ತಿಂಗಳ ಗೃಹ ಬಂಧನ ವಿಧಿಸಲಾಗಿದೆ. ಇಬ್ಬರು ಆರೋಪಿಗಳಾದ ಜಗರಾಜ್ ಸಿಂಗ್ ಮತ್ತು ಗುರ್ಬಿಂದರ್ ಸಿಂಗ್ ಅವರನ್ನು ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದರೆ, ಇನ್ನಿಬ್ಬರು, ಜೋಬನ್‌ಪ್ರೀತ್ ಸಿಂಗ್ ಮತ್ತು ಹರ್ದೀಪ್ ಸಿಂಗ್ ಸಂಧು, ಹರ್ನೆಕ್ ಸಿಂಗ್ ಹತ್ಯೆಯ ಯತ್ನದಲ್ಲಿ ಭಾಗಿಯಾಗಿದ್ದಕ್ಕಾಗಿ ವಿಚಾರಣೆಗೆ ಕಾಯುತ್ತಿದ್ದಾರೆ.

SCROLL FOR NEXT