ವಿದೇಶ

ಫಿಲಿಪೈನ್ಸ್ ನಲ್ಲಿ ಭೂಕಂಪ, ಸುನಾಮಿಯ ಎಚ್ಚರಿಕೆ: ರಿಕ್ಟಾರ್ ಮಾಪಕದಲ್ಲಿ 7.4 ತೀವ್ರತೆ ದಾಖಲು!

Srinivas Rao BV

ಫಿಲಿಪೈನ್ಸ್: ಫಿಲಿಪೈನ್ಸ್ ನಲ್ಲಿ ತೀವ್ರ ಭೂಕಂಪ ಸಂಭವಿಸಿದ್ದು, ರಿಕ್ಟಾರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.

ಫಿಲಿಪ್ಪೀನ್ಸ್‌ನ ಮಿಂಡಾನಾವೊದಲ್ಲಿ 20:07:08 (ಸ್ಥಳೀಯ ಕಾಲಮಾನ) ಕ್ಕೆ ಫಿಲಿಪೈನ್ಸ್‌ನ ಮನಿಲಾದ 893 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್ ಸಿಎಸ್ ಹೇಳಿದೆ.

NCS ಪ್ರಕಾರ, ಭೂಕಂಪದ ಆಳವು 50 ಕಿಲೋಮೀಟರ್‌ನಲ್ಲಿ ದಾಖಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದುವರೆಗೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. 

SCROLL FOR NEXT