ಸಾಂಕೇತಿಕ ಚಿತ್ರ 
ವಿದೇಶ

ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರ ಸಾವು!

ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ.

ವಾಷಿಂಗ್ ಟನ್:  ಅಮೇರಿಕಾದಲ್ಲಿ ಭಾರತೀಯ ಮೂಲದ ಶ್ರೀಮಂತ ಕುಟುಂಬದ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ. ಯುಎಸ್ ನ ಮ್ಯಾಸಚೂಸೆಟ್ಸ್ ನಲ್ಲಿ ಈ ಘಟನೆ ವರದಿಯಾಗಿದ್ದು, 5 ಮಿಲಿಯನ್ ಡಾಲರ್ ಮೌಲ್ಯದ ಮ್ಯಾನ್ಶನ್ ನಲ್ಲಿ ಭಾರತೀಯ ಮೂಲದ ದಂಪತಿ ಹಾಗೂ ಅವರ ಮಗಳ ಶವ ಪತ್ತೆಯಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮೂಲಕ ತಿಳಿದುಬಂದಿದೆ. ರಾಕೇಶ್ ಕಮಲ್ (57) ಅವರ ಪತ್ನಿ ಟೀನಾ (54) ಹಾಗೂ ಈ ದಂಪತಿಯ 18 ವರ್ಷದ ಅರಿಯಾನಾ ಮೃತ ವ್ಯಕ್ತಿಗಳಾಗಿದ್ದಾರೆ.

ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ನೈಋತ್ಯಕ್ಕೆ 32 ಕಿಲೋಮೀಟರ್ ದೂರದಲ್ಲಿದೆ. ಟೀನಾ ಮತ್ತು ಅವರ ಪತಿ, ಈ ಹಿಂದೆ ಎಡುನೋವಾ ಎಂಬ ಈಗ ಸ್ಥಗಿತಗೊಂಡಿರುವ ಶಿಕ್ಷಣ ವ್ಯವಸ್ಥೆಗಳ ಕಂಪನಿಯನ್ನು ನಡೆಸುತ್ತಿದ್ದರು.

"ಭೀಕರ ದುರಂತ"ವನ್ನು "ಕೌಟುಂಬಿಕ ಹಿಂಸಾಚಾರದ ಪರಿಸ್ಥಿತಿಯಿಂದ ಉಂಟಾಗಿರುವ" ಘಟನೆ ಎಂದು ವಿವರಿಸಿದ ಸ್ಥಳೀಯ ಅಧಿಕಾರಿ, ರಾಕೇಶ್ ಕಮಲ್ ಶವದ ಬಳಿ ಬಂದೂಕು ಕಂಡುಬಂದಿದೆ ಎಂದು ಹೇಳಿದರು. ದಂಪತಿಗಳು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಆನ್‌ಲೈನ್ ದಾಖಲೆಗಳು ತೋರಿಸುತ್ತವೆ. ಈ ಕುಟುಂಬದ ಸಂಬಂಧಿಕರು ಇವರನ್ನು ಭೇಟಿ ಮಾಡಲು ಇಲ್ಲಿಗೆ ಆಗಮಿಸಿದ್ದಾಗ ಶವಗಳು ಪತ್ತೆಯಾಗಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT