ಪ್ರಬಲ ಸರಣಿ ಭೂಕಂಪಕ್ಕೆ ನಲುಗಿದ ಟರ್ಕಿ 
ವಿದೇಶ

ಪ್ರಬಲ ಸರಣಿ ಭೂಕಂಪಕ್ಕೆ ನಲುಗಿದ ಟರ್ಕಿ, ಸಿರಿಯಾ; ಸಾವಿನ ಸಂಖ್ಯೆ 2300ಕ್ಕೆ ಏರಿಕೆ

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 2,300ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಅಂಕಾರಾ(ಟರ್ಕಿ)/ಅಜ್ಮರಿನ್ (ಸಿರಿಯಾ): ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 2,300ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಯುದ್ಧದಿಂದ ಧ್ವಂಸಗೊಂಡ ಸಿರಿಯಾದ ಉತ್ತರ ಗಡಿಯಲ್ಲಿ ಮತ್ತು ದಕ್ಷಿಣ ಟರ್ಕಿಯಲ್ಲಿ ಇಂದು ಮೂರನೇ ಬಾರಿ ಭೂಮಿ ಕಂಪಿಸಿದ್ದು, ಪ್ರಬಲ ಸರಣಿ ಭೂಕಂಪದಿಂದ 6,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕಳೆದ 24 ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಸಾವಿರಾರು ಕಟ್ಟಡಗಳು ಧರೆಗುರುಳಿವೆ ಮತ್ತು ನೂರಾರು ಜನ ಜೀವಂತ ಸಮಾಧಿಯಾಗಿದ್ದಾರೆ. ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಮೊದಲ ಬಾರಿಗೆ ಇಂದು ಬೆಳಗ್ಗೆ4 ಗಂಟೆಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡನೇ ಬಾರಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವು ಗಂಟೆಗಳ ನಂತರ ಮಧ್ಯ ಟರ್ಕಿಯಲ್ಲಿ 6.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಭೂಕಂಪನದಿಂದ ನೂರಾರು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ ಸಾವಿರಾರು ಜನ ಅದರ ಅವಶೇಷದಡಿ ಸಿಲುಕಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ