ವಿದೇಶ

ರಶ್ದಿ ಮೇಲೆ ದಾಳಿ ಮಾಡಿದವನಿಗೆ ಇರಾನಿಯನ್ ಫೌಂಡೇಷನ್ ನಿಂದ ಕೃಷಿ ಭೂಮಿ ಉಡುಗೊರೆ! 

Srinivas Rao BV

ನವದೆಹಲಿ: ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಭಯೋತ್ಪಾದಕನಿಗೆ ಇರಾನಿಯನ್ ಫೌಂಡೇಶನ್ 1,000 ಸ್ಕ್ವೇರ್ ಮೀಟರ್ ನಷ್ಟು ಕೃಷಿ ಭೂಮಿಯ ಉಡುಗೊರೆಯನ್ನು ಘೋಷಿಸಿದೆ. 

ರಶ್ದಿ ಅವರ ಒಂದು ಕಣ್ಣನ್ನು ಕುರುಡಾಗಿಸಿ, ಕೈ ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿ ಮುಸ್ಲಿಮರನ್ನು ಸಂತುಷ್ಟಗೊಳಿಸಿದ, ಅಮೇರಿಕಾದ ಯುವಕನ ಕೃತ್ಯಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ ಎಂದು ಇಮಾಮ್  ಖೊಮೇನಿಯ ಫತ್ವಾಗಳನ್ನು ಜಾರಿಗೊಳಿಸಲು ಇರುವ ಫೌಂಡೇಷನ್ ನ ಕಾರ್ಯದರ್ಶಿ ಮೊಹಮ್ಮದ್ ಇಸ್ಮೈಲ್ ಜರೇಯಿ ರಾಯ್ಟರ್ಸ್ ಗೆ ತಿಳಿಸಿದ್ದಾರೆ. 

ರಶ್ದಿ ಪರಿಸ್ಥಿತಿ ಈಗ ಜೀವಂತ ಶವಕ್ಕಿಂತಲೂ ಭಿನ್ನವೇನು ಅಲ್ಲ. ಈ ಪರಿಸ್ಥಿತಿಗೆ ತಂದ ಕೆಚ್ಚೆದೆಯ ಕ್ರಮವನ್ನು ಅಭಿನಂದಿಸುವುದಕ್ಕಾಗಿ ಕೃತ್ಯ ಎಸಗಿದ ವ್ಯಕ್ತಿ ಅಥವಾ ಆತನಿಗೆ ಕಾನೂನಾತ್ಮಕವಾಗಿ ಸಂಬಂಧಿಸಿದವರಿಗೆ 1,000 ಸ್ಕ್ವೇರ್ ಮೀಟರ್ ನಷ್ಟು ಕೃಷಿ ಭೂಮಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಫೌಂಡೇಷನ್ ನ ಕಾರ್ಯದರ್ಶಿ ಹೇಳಿರುವುದನ್ನು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

SCROLL FOR NEXT