ವಿದೇಶ

ಪ್ರಾಮಾಣಿಕತೆಯಿಂದ ಕೋವಿಡ್ ಮಾಹಿತಿ ಹಂಚಿಕೆ: ಚೀನಾ

Nagaraja AB

ಬೀಜಿಂಗ್: ಕೋವಿಡ್ ಅಂಕಿಸಂಖ್ಯೆ ಹಾಗೂ ಸಾವು ನೋವು ಕುರಿತು ಮಾಹಿತಿ ಹಂಚಿಕೊಳ್ಳುವಲ್ಲಿ ಚೀನಾ ರಾಷ್ಟ್ರದ ಮೇಲೆ ಇತರ ರಾಷ್ಟ್ರಗಳಿಗೆ ವಿಶ್ವಾಸವಿಲ್ಲ. ಅನುಮಾನದಿಂದಲೇ ನೋಡುವಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ಆರೋಗ್ಯ ಸಚಿವಾಲಯ, ಕೋವಿಡ್ ಸಂಖ್ಯೆ, ಮತ್ತಿತರ ಮಾಹಿತಿ ಪ್ರಾಮಾಣಿಕವಾಗಿರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.

ಚೀನಾ ಯಾವಾಗಲೂ ಕೋವಿಡ್-19 ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ನಿಜವನ್ನೇ ಹೇಳುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದಡಿಯ ಬ್ಯೂರೋ ಆಫ್ ಮೆಡಿಕಲ್ ಆಡ್ಮಿನಿಷ್ಟ್ರೇಶನ್ ಮುಖ್ಯಸ್ಥ ಜಿಯಾವೊ ಯಹೂ ಹೇಳಿರುವುದಾಗಿ ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

ಕೋವಿಡ್ ಸಾವನ್ನು ಎರಡು ವರ್ಗಗಳಾಗಿ ವಿಂಗಂಡಿಸಲಾಗುತ್ತಿದೆ. ಇದನ್ನು 2020ರಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಸೋಂಕು ತಗುಲಿ ಉಸಿರಾಟಕ್ಕೆ ತೊಂದರೆಯಾಗಿ ಸಾವನ್ನಪ್ಪಿದ್ದವರ ಸಂಖ್ಯೆಯನ್ನು ಸಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಚೀನಾದ ವಾಸ್ತವ ಕೋವಿಡ್ ಅಂಕಿ ಅಂಶಗಳ ಮಾಹಿತಿ ಹಂಚಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಗೆಬ್ರೆಯೇಸಸ್ ಜೊತೆಗಿನ ಸಭೆ ನಂತರ ಚೀನಾ ಈ ಕ್ರಮ ಕೈಗೊಂಡಿದೆ ಎಂದು ಡಬ್ಲ್ಯೂಹೆಚ್ ಒ ವೆಬ್ ಸೈಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೆ ಯುಕೆ, ಫ್ರಾನ್ಸ್, ಭಾರತ, ಯುಎಸ್ ಎ ಮತ್ತು ಜಪಾನ್ ರಾಷ್ಟ್ರಗಳು ಹೊಸ ಕೋವಿಡ್-19 ಕ್ರಮಗಳು ಹೇರಿವೆ.

SCROLL FOR NEXT