ಶಾಲೆ ಬಳಿ ವಿದ್ಯಾರ್ಥಿಗಳು ಮತ್ತು ಪೊಲೀಸರು 
ವಿದೇಶ

ಅಮೆರಿಕ: ತರಗತಿಯಲ್ಲೇ ಶಿಕ್ಷಕಿ ಮೇಲೆ ಗುಂಡು ಹಾರಿಸಿದ ಆರು ವರ್ಷದ ಬಾಲಕ!

ಅಮೆರಿಕದ ವರ್ಜೀನಿಯಾದ ಶಾಲೆಯಲ್ಲಿ ಶುಕ್ರವಾರ ಪಾಠ ಮಾಡುತ್ತಿದ್ದ ಶಿಕ್ಷಕಿಯ ಮೇಲೆ 6 ವರ್ಷದ ಬಾಲಕ ಗುಂಡು ಹಾರಿಸಿದ್ದು, ಘಟನೆಯಲ್ಲಿ ಶಿಕ್ಷಕಿ ಗಾಯಗೊಂಡಿದ್ದಾರೆ ಎಂದು ನ್ಯೂಪೋರ್ಟ್ ನ್ಯೂಸ್ ನಗರದ ಪೊಲೀಸರು ಮತ್ತು ಶಾಲಾ...

ನಾರ್ಫೋಕ್: ಅಮೆರಿಕದ ವರ್ಜೀನಿಯಾದ ಶಾಲೆಯಲ್ಲಿ ಶುಕ್ರವಾರ ಪಾಠ ಮಾಡುತ್ತಿದ್ದ ಶಿಕ್ಷಕಿಯ ಮೇಲೆ 6 ವರ್ಷದ ಬಾಲಕ ಗುಂಡು ಹಾರಿಸಿದ್ದು, ಘಟನೆಯಲ್ಲಿ ಶಿಕ್ಷಕಿ ಗಾಯಗೊಂಡಿದ್ದಾರೆ ಎಂದು ನ್ಯೂಪೋರ್ಟ್ ನ್ಯೂಸ್ ನಗರದ ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

ರಿಚ್ನೆಕ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ. ಆದರೆ 30 ವರ್ಷದ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಾಲಾ ಸಿಬ್ಬಂದಿ ಗಾಯಗೊಂಡ ಶಿಕ್ಷಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯಾಹ್ನದ ವೇಳೆಗೆ ಅವರ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ನ್ಯೂಪೋರ್ಟ್ ನ್ಯೂಸ್ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಹೇಳಿದ್ದಾರೆ.

ಶಿಕ್ಷಕಿಯ ಜೊತೆ ನಡೆದ ವಾಗ್ವಾದದ ಸಂದರ್ಭದಲ್ಲಿ ಆರು ವರ್ಷದ ಬಾಲಕ ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ಆಘಾತ ತಂದಿದೆ ಎಂದು ಶಾಲಾ ಅಧೀಕ್ಷಕ ಜಾರ್ಜ್ ಪಾರ್ಕರ್ ಹೇಳಿದ್ದಾರೆ.

ಗುಂಡು ಹಾರಿಸಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಘಟನೆ ಆಕಸ್ಮಿಕವಲ್ಲ ಎಂದು ತೀರ್ಮಾನಿಸಲಾಗಿದೆ. ಬಾಲಕನ ಕೈಗೆ ಬಂದೂಕು ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

'ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ'.. 'ಉತ್ತರಿಸದಿದ್ದ ಮೇಲೆ ಅಧಿವೇಶನ ಏಕೆ ಕರೆಯಬೇಕು': ಸ್ಪೀಕರ್ UT Khader ಕಿಡಿ

ಹಾರ್ಮುಜ್ ಜಲಸಂಧಿ ಬಂದ್ ಮಾಡಿಲ್ಲ; ವಿಶ್ವ ನಾಯಕರು ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹೇರಬೇಕು: ಇರಾನ್

SCROLL FOR NEXT