ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷರಿಂದ ಗೌರವ 
ವಿದೇಶ

ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಗೌರವ: ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಿಂದ ಆತಿಥ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನೀಡಿ ಗೌರವಿಸಿದ್ದಾರೆ. 

ಪ್ಯಾರಿಸ್(ಫ್ರಾನ್ಸ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್  ಅವರು ನೀಡಿ ಗೌರವಿಸಿದ್ದಾರೆ. 

ಎರಡು ದಿನಗಳ ಭೇಟಿಗಾಗಿ ನಿನ್ನೆ ಗುರುವಾರ ಪ್ಯಾರಿಸ್‌ಗೆ ಆಗಮಿಸಿದ ಮೋದಿಯವರಿಗೆ ಅಲ್ಲಿನ ನಾಯಕರು ಅಭೂತಪೂರ್ವ ಸ್ವಾಗತ ನೀಡಿದರು. ಇಂದು ಪ್ರಧಾನಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಮ್ಯಾಕ್ರೋನ್ ಜೊತೆಗೆ ಭಾಗಿಯಾಗಲಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಅವರು ಇಲ್ಲಿನ ಎಲಿಸೀ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ, "ಪಾಲುದಾರಿಕೆಯ ಮನೋಭಾವವನ್ನು ಸಾಕಾರಗೊಳಿಸುವ ಹೆಜ್ಜೆಯಿದು, ಫ್ರಾನ್ಸ್ ಅಧ್ಯಕ್ಷರಿಂದ ಅತ್ಯುನ್ನತ ಪ್ರಶಸ್ತಿ'' ಎಂದು ಬರೆದುಕೊಂಡಿದ್ದಾರೆ. 

"ಭಾರತದ ಜನರ ಪರವಾಗಿ ಈ ಏಕಮಾನ ಗೌರವಕ್ಕಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು" ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.ಇದಕ್ಕೂ ಮುನ್ನ ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಎಲಿಸೀ ಅರಮನೆಯಲ್ಲಿ ಮೋದಿ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.

ಭಾರತೀಯ ವಲಸಿಗರೊಂದಿಗೆ ಪ್ರಧಾನಿ ಸಂವಾದ: ನಿನ್ನೆ ಸಂಜೆ ಪ್ಯಾರಿಸ್ ಗೆ ಬಂದಿಳಿದ ಪ್ರಧಾನಿ ಮೋದಿ ಇಲ್ಲಿನ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದರು. 

ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಉತ್ಸಾಹಭರಿತ ಪ್ರೇಕ್ಷಕರನ್ನು ಉದ್ದೇಶಿಸಿ ಸುಮಾರು ಒಂದು ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ - ಸೀನ್ ನದಿಯ ದ್ವೀಪದಲ್ಲಿ ಪ್ರದರ್ಶನ ಕಲೆಯ ಕೇಂದ್ರ - ಭಾರತದ ವೇಗದ ಬೆಳವಣಿಗೆಯನ್ನು ವಿವರಿಸಿದರು. ಜಗತ್ತು ಹೊಸದತ್ತ ಸಾಗುತ್ತಿದೆ ಎಂದು ಪ್ರತಿಪಾದಿಸಿದರು. ಸುವ್ಯವಸ್ಥೆ, ಭಾರತದ ಶಕ್ತಿ ಮತ್ತು ಪಾತ್ರವೂ ಬಹಳ ಬೇಗನೆ ಬದಲಾಗುತ್ತಿದೆ ಎಂದರು. 

ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯುವುದಾಗಿ ಮೋದಿ ಘೋಷಿಸಿದರು. ಫ್ರಾನ್ಸ್ ನಲ್ಲಿ ಸ್ನಾತಕೋತ್ತರ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ಐದು ವರ್ಷಗಳ ನಂತರದ ಕೆಲಸದ ವೀಸಾಗಳನ್ನು ಪಡೆಯುತ್ತಾರೆ ಎಂದು ಭಾರತೀಯ ಸಮೂಹವನ್ನುದ್ದೇಶಿಸಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT