ಅಂಜು 
ವಿದೇಶ

ಆಗಸ್ಟ್ 20ಕ್ಕೆ ಭಾರತಕ್ಕೆ ಅಂಜು ಮರಳುತ್ತಾಳೆ, ಆಕೆಯನ್ನು ಮದುವೆಯಾಗುವ ಯೋಚನೆ ಇಲ್ಲ: ಪಾಕ್ ವ್ಯಕ್ತಿ

ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ವ್ಯಕ್ತಿ ನುಸ್ರುಲ್ಲಾ ಹೇಳಿದ್ದಾರೆ.

ಪೇಶಾವರ್: ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ವ್ಯಕ್ತಿ ನುಸ್ರುಲ್ಲಾ ಹೇಳಿದ್ದಾರೆ.

ಪ್ರೀತಿ ಪ್ರೇಮದ ಆಯಾಮವನ್ನು ತಳ್ಳಿ ಹಾಕಿರುವ ನುಸ್ರುಲ್ಲಾ, ಅಂಜುಳ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ತಂಗಿದ್ದಾಳೆ ಎಂದು ನುಸ್ರುಲ್ಲಾ ಹೇಳಿದ್ದಾನೆ.

ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ 34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ 2019ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಆತನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಗೆ ಅಂಜು ತೆರಳಿದ್ದಳು.

ಅಂಜು ಆರಂಭದಲ್ಲಿ ಪೊಲೀಸರ ವಶದಲ್ಲಿದ್ದರು, ಆದರೆ ಅವರ ಪ್ರಯಾಣ ದಾಖಲೆಗಳನ್ನು ಜಿಲ್ಲಾ ಪೊಲೀಸರು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿದ್ದರು. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಯ ಭೇಟಿಗೆ ಅನುಮತಿ ನೀಡಲಾಗಿದೆ. ದೇಶಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ಮಾಧ್ಯಮ ವರದಿಗಳ ನಂತರ ರಾಜಸ್ಥಾನ ಪೊಲೀಸರ ತಂಡವು ಅಂಜು ಅವರ ಬಗ್ಗೆ ವಿಚಾರಿಸಲು ಭಿವಾಡಿಯ ಮನೆಗೆ ತಲುಪಿದೆ. ಜೈಪುರಕ್ಕೆ ಹೋಗುವ ನೆಪದಲ್ಲಿ ಗುರುವಾರ ಮನೆಯಿಂದ ಹೊರ ಹೋಗಿದ್ದಳು ಆದರೆ ಆಕೆ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ನಂತರ ಗೊತ್ತಾಗಿದೆ ಎಂದು ಆಕೆಯ ಪತಿ ಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅವಳೊಂದಿಗೆ ವಾಟ್ಸಾಪ್‌ನಲ್ಲಿ ಮಾತನಾಡಿದಾಗ ಆಕೆ ಲಾಹೋರ್ ನಲ್ಲಿ ಇರುವುದಾಗಿ ತಿಳಿಯಿತು ಎಂದುಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ. ಅರವಿಂದ್ ಮತ್ತು ಅಂಜು 2007 ರಲ್ಲಿ ವಿವಾಹವಾಗಿದ್ದು, ಅವರಿಗೆ ಅವರಿಗೆ 15 ವರ್ಷದ ಹುಡುಗಿ ಮತ್ತು ಆರು ವರ್ಷದ ಮಗನಿದ್ದಾರೆ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಯಾರೊಂದಿಗೂ ಸಂಪರ್ಕದಲ್ಲಿರುತ್ತಾಳೆ ಎಂಬುದೇ ನನಗೆ ತಿಳಿದಿರಲಿಲ್ಲ ಎಂದು ಅರವಿಂದ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT