ವಿದೇಶ

ಇಸ್ರೇಲ್ ನಿಂದ ನೂರಾರು ಐಎಸ್ಐಎಸ್ ಭಯೋತ್ಪಾದಕರ ಹತ್ಯೆ: ಮಾಜಿ ಸೇನಾ ಮುಖ್ಯಸ್ಥ

Srinivas Rao BV

ಇಸ್ರೇಲ್ ನ ರಕ್ಷಣಾ ಪಡೆಗಳು 2015 ರಲ್ಲಿ ಇಸ್ಲಾಮಿಕ್ ಸ್ಟೇಟ್ ನ ವಿರುದ್ಧ  ಬಾಹ್ಯ ಕಾರ್ಯಾಚರಣೆಗಳನ್ನು ನಡೆಸಿ ನೂರಾರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ನ ಶಾಸಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗ್ಯಾಡಿ ಐಸೆನ್‌ಕೋಟ್ ತಿಳಿಸಿದ್ದಾರೆ. 

ಐಡಿಎಫ್ ಎಷ್ಟು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದೆ ಎಂಬುದನ್ನು ಐಎಸ್ಐಎಸ್ ಅರಿತಿದ್ದು, ನೂರಾರು ಮಂದಿ ಉಗ್ರರನ್ನು ಕಳೆದುಕೊಂಡು, ಅಷ್ಟೇ ಸಂಖ್ಯೆಯ ಉಗ್ರರು ತೀವ್ರವಾಗಿ ಗಾಯಗೊಂಡಿದ್ದರು ಎಂದು  ಗ್ಯಾಡಿ ಐಸೆನ್‌ಕೋಟ್  ಮಾಹಿತಿ ನೀಡಿದ್ದಾರೆ.
 
ಟೆಲ್ ಅವೀವ್ ನ ಇನ್‌ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿರುವ ಗ್ಯಾಡಿ ಐಸೆನ್‌ಕೋಟ್,  ನಿರ್ದಿಷ್ಟಪಡಿಸದ ಮೂರನೇ ವ್ಯಕ್ತಿಯಿಂದ ಸಹ ಇಸ್ರೇಲ್ ಗೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಲು ಮನವಿ ಬಂದಿತ್ತು ಎಂದು ನ್ಯಾಷನಲ್ ಯುನಿಟಿ ಪಕ್ಷದ  ಸದಸ್ಯರೂ ಆಗಿರುವ ಗ್ಯಾಡಿ ಐಸೆನ್‌ಕೋಟ್ ತಿಳಿಸಿದ್ದು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

"ಜಗತ್ತಿನಲ್ಲಿ ಅನೇಕ ರಾಜ್ಯಗಳು ಅಂಚೆ ಚೀಟಿಯ ಗಾತ್ರದ ಟಾರ್ಗೆಟ್ ನ್ನು ಗುರುತಿಸಿ ನಂತರ ಅದನ್ನು 1,000-ಕಿಲೋಮೀಟರ್ [620 ಮೈಲಿ] ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕ್ಷಿಪಣಿಯಿಂದ ಹೊಡೆಯುತ್ತವೆ. ನಮ್ಮ ಶತ್ರುಗಳು ನಾವು ಇದನ್ನು ಮಾಡುವುದನ್ನು ನೋಡಿದರು, ರಷ್ಯನ್ನರು ನೋಡಿದರು ಮತ್ತು ಅಮೆರಿಕನ್ನರು ಸಹ ನೋಡಿದ್ದಾರೆ" ಎಂದು ಐಸೆನ್‌ಕೋಟ್ ಹೇಳಿದರು.

SCROLL FOR NEXT