ವಿದೇಶ

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗಾಭ್ಯಾಸ

Lingaraj Badiger

ನ್ಯೂಯಾರ್ಕ್‌: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ನೀವೆಲ್ಲ ಇಲ್ಲಿಗೆ ಬಂದಿದ್ದೀರಿ. ಬಹು ದೂರದಿಂದ ಸೂರ್ಯೋದಯದ ವೇಳೆಗೇ ಇಲ್ಲಿಗೆ ಆಗಮಿಸಿದ್ದೀರಿ. ಯೋಗ ಅಂದರೆ ಒಗ್ಗಟ್ಟು. ಯೋಗದಿಂದಾಗಿ ನಾವೆಲ್ಲ ಇಲ್ಲಿ ಒಂದುಗೂಡಿದ್ದೇವೆ ಎಂದು ಹೇಳಿದರು.

ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ. ಯೋಗ ಅಂದರೆ ಏಕತೆ, ಮಾನವೀಯತೆ. ಯೋಗದ ಶಕ್ತಿ ನಮ್ಮನ್ನು ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಸ್ವಸ್ಥವಾಗಿರಿಸುವುದಾಗಿದೆ. ನಿಜವಾಗಿಯೂ ಇಂದು ಯೋಗ ಜಾಗತಿಕವಾಗಿ ಪ್ರಖ್ಯಾತಿಯಾಗಿದೆ. ಯೋಗ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಸರ್ವೇ ಭವಂತು ಸುಖಿನಃ. ಸರ್ವೇ ಸಂತು ನಿರಾಮಯಃ. ಎಲ್ಲರೂ ಸುಖವಾಗಿ, ಆರೋಗ್ಯವಾಗಿ ಇರುವಂತಾಗಲಿ ಎಂದು ಹೇಳಿದರು.

ಈ ಐತಿಹಾಸಿಕ ಯೋಗ ದಿನಾಚರಣೆಯಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು, ವಿಶ್ವದ ಹಲವು ರಾಯಭಾರಿಗಳು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

ಇಂದಿನ ಆಚರಣೆಯು ನಿಜಕ್ಕೂ ಬಹಳ ವಿಶೇಷವಾಗಿದೆ. ಏಕೆಂದರೆ ಇಲ್ಲಿ ಪ್ರಧಾನಿ ಮೋದಿಯವರು ನಮ್ಮನ್ನು ಮುನ್ನಡೆಸಿ ಯೋಗಾಭ್ಯಾಸ ಮಾಡಿಸಲಿದ್ದಾರೆ. ಅವರ ನೇತೃತ್ವದಲ್ಲಿ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗದಿನ ಎಂದು ಘೋಷಿಸಲಾಯಿತು ಎಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ರುಚಿರ ಕಾಂಬೋಜ್ ಹೇಳಿದ್ದಾರೆ.

SCROLL FOR NEXT