ವಿದೇಶ

ಕೋರ್ಟ್ ಆದೇಶ ಸ್ವೀಕರಿಸಲ್ಲ: ಯಾವುದೇ ಹಿಂದಿ ಚಲನಚಿತ್ರಗಳಿಗೆ ಅನುಮತಿ ನೀಡಲ್ಲ- ಕಠ್ಮಂಡು ಮೇಯರ್

Nagaraja AB

ಕಠ್ಮಂಡು: ನ್ಯಾಯಾಲಯದ ಆದೇಶದ ಹೊರತಾಗಿಯೂ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಠ್ಮಂಡು ಮೇಯರ್ ಬಲೇನ್ ಶಾ ಗುರುವಾರ ಹೇಳಿದ್ದಾರೆ. ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುತ್ತಿದ್ದಂತೆಯೇ ಅದನ್ನು ಮೇಯರ್ ಶಾ ಪ್ರಶ್ನಿಸಿದ್ದಾರೆ. 

ನೇಪಾಳ ಫಿಲ್ಮ್ ಯೂನಿಯನ್‌ನ ಮನವಿಗೆ ಗುರುವಾರ ಪ್ರತಿಕ್ರಿಯಿಸಿದ ಪಠಾನ್  ಹೈಕೋರ್ಟ್ ಸೆನ್ಸಾರ್ ಮಂಡಳಿಯಿಂದ ಅನುಮತಿಸಲಾದ ಯಾವುದೇ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಬಾರದು ಎಂದು ಹೇಳಿದೆ. ‘ಆದಿಪುರುಷ’ ಚಿತ್ರದ ನಿರ್ಮಾಪಕರು ಸೀತೆಯ ಜನ್ಮಸ್ಥಳದ ತಪ್ಪನ್ನು ಸರಿಪಡಿಸುವವರೆಗೆ ಯಾವುದೇ ಭಾರತೀಯ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾ ಬೆದರಿಕೆಯ ವಿರುದ್ಧ ನೇಪಾಳ ಚಲನಚಿತ್ರ ಒಕ್ಕೂಟದ ಪದಾಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಿಂದೂ ಮಹಾಕಾವ್ಯವಾದ ರಾಮಾಯಣ ಆಧರಿಸಿದ ಚಿತ್ರದ ಕಥಾ ವಸ್ತು ಮತ್ತು ಸಂಭಾಷಣೆಗಳ ಬಗ್ಗೆ ನೇಪಾಳ ಮತ್ತು ಭಾರತದಲ್ಲಿ ವಿವಾದ ಉಂಟಾಗಿದೆ. ತಪ್ಪಿನ ಬಗ್ಗೆ ಧ್ವನಿ ಎತ್ತಿದ್ದ ಮೇಯರ್,  ಕಠ್ಮಂಡುವಿನ ಚಿತ್ರಮಂದಿರಗಳಲ್ಲಿ ಒಂದು ವಾರದವರೆಗೆ  ಆದಿಪುರುಷ ಚಲನಚಿತ್ರ ಪ್ರದರ್ಶನವನ್ನು  ನಿಲ್ಲಿಸಿದರು. ಚಿತ್ರದ ನಿರ್ಮಾಪಕರು ಮೇಯರ್‌ಗೆ ಪ್ರತ್ಯೇಕ ಪತ್ರ ಬರೆದು ಚಿತ್ರದಲ್ಲಿ ಯಾವುದೇ ರೀತಿಯ ಸಂಭಾಷಣೆ ನೇಪಾಳಿ ಜನರ ಭಾವನೆಗೆ ಧಕ್ಕೆ ತಂದಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

"ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ ನಾನು ಯಾವುದೇ ಕಾನೂನು ಅಥವಾ ನ್ಯಾಯಾಲಯವನ್ನು ಪಾಲಿಸಲು ಹೋಗುವುದಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದ ಕೂಡಲೇ ಶಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದಾರೆ. ಸೀತೆ ಜನಕಪುರದಲ್ಲಿ ಜನಿಸಿದಳು ಎಂದು ನೇಪಾಳಿ ಜನರು ನಂಬುತ್ತಾರೆ, ಅದು ಈಗ ನೇಪಾಳದಲ್ಲಿ  ಬರುತ್ತದೆ.

SCROLL FOR NEXT