ಪ್ರಿಗೋಜಿನ್ ಸೇನೆ ವಾಪಸ್ 
ವಿದೇಶ

ಪ್ರಕರಣ ಕೈಬಿಟ್ಟ ಕ್ರೆಮ್ಲಿನ್; ದಂಗೆ ನಿಲ್ಲಿಸಿ ಶಿಬಿರಗಳಿಗೆ ಮರಳಿ ಎಂದ ಪ್ರಿಗೋಝಿನ್‌; ಬೆಲಾರಸ್ ಅಧ್ಯಕ್ಷರ ಸಂಧಾನ

ರಷ್ಯಾ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ.

ಮಾಸ್ಕೊ: ರಷ್ಯಾ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ.

‘ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ಮರಳುವಂತೆ ತಮ್ಮ ಪಡೆಗೆ ಆದೇಶಿಸಿದ್ದೇನೆ ಎಂದು ‘ವ್ಯಾಗ್ನರ್‌’ ನಾಯಕ ಪ್ರಿಗೋಷಿನ್‌ ತಿಳಿಸಿದ್ದಾರೆ.

ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ.ಮೀ ದೂರದಲ್ಲಿರುವಾಗ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಪ್ರಿಗೋಜಿನ್‌ ತಿಳಿಸಿದ್ದು, ಆದರೆ, ರಷ್ಯಾ ತಮ್ಮ ಬೇಡಿಕೆಗಳಿಗೆ ಸಮ್ಮತಿಸಿದೆಯೇ ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ರಷ್ಯಾ ಸಹ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ವ್ಯಾಗ್ನರ್‌ ದಾಳಿ ನಡೆಸಬಹುದೆಂದು ರಷ್ಯಾ ದಕ್ಷಿಣ ಭಾಗದಲ್ಲಿ ಚೆಕ್ ಪಾಯಿಂಟ್‌ಗಳನ್ನು ನಿರ್ಮಿಸಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಸೈನಿಕರನ್ನು ನಿಯೋಜಿಸಿ ಹೋರಾಟಕ್ಕೆ ಅಣಿಯಾಗಿತ್ತು. ಕೆಂಪು ಚೌಕದ ಕಟ್ಟಡವನ್ನು ಮುಚ್ಚಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸದಂತೆ ಮೇಯರ್ ಸೂಚಿಸಿದ್ದರು. ಆದರೆ ಇದೀಗ ಯೆವ್ಗಿನಿ ಪ್ರಿಗೋಝಿನ್‌ ತನ್ನ ವಿರುದ್ಧದ ಪ್ರಕರಣಗಳನ್ನುಕ್ರೆಮ್ಲಿನ್ ಕೈ ಬಿಡುವ ಭರವಸೆ ನೀಡಿದ ಬೆನ್ನಲ್ಲೇ ದಂಗೆಯನ್ನು ಹಿಂಪಡೆದಿದ್ದಾರೆ.

ಘೋಷಣೆಯು ರಷ್ಯಾದಲ್ಲಿ ಉದ್ಭವಿಸಿದ ಹಠಾತ್‌ ಬಿಕ್ಕಟ್ಟು ಶಮನಗೊಳ್ಳುವ ಸಾಧ್ಯತೆ ದಟ್ಟವಾಗಿಸಿದೆ.

ಬೆಲಾರಸ್ ಅಧ್ಯಕ್ಷರ ಸಂಧಾನ ಯಶಸ್ವಿ
ಇನ್ನು ಕ್ರೆಮ್ಲಿನ್ ಮತ್ತು ಪ್ರಿಗೋಜಿನ್ ನಡುವೆ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿ ವ್ಯಾಗ್ನರ್ ಹೋರಾಟಗಾರರನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ನಿಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಕೈ ಬಿಡುತ್ತೇವೆ ಎಂಬ ಭರವಸೆ ಮೇರೆಗೆ ಪ್ರಿಗೋಝಿನ್ ದಂಗೆಯನ್ನು ಹಿಂದಕ್ಕೆ ಪಡೆದಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT