ಇಂಡಿಯಾ ಗ್ಲೋಬಲ್ ಫೋರಮ್‌ನ ಯುಕೆ-ಇಂಡಿಯಾ ವೀಕ್ 2023 ಸಮಾರಂಭದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹಿರಿಯ ಸೈನಿಕ ರಾಜಿಂದರ್ ಸಿಂಗ್ ದತ್ತ್ ಅವರಿಗೆ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಯನ್ನು ನೀಡಿದರು 
ವಿದೇಶ

2ನೇ ವಿಶ್ವಯುದ್ಧ ವೇಳೆ ಹೋರಾಡಿದ್ದ 101 ವರ್ಷದ ಹಿರಿಯ ಸಿಖ್ ಸೈನಿಕರನ್ನು ಗೌರವಿಸಿದ ಯುಕೆ ಪ್ರಧಾನಿ ರಿಷಿ ಸುನಕ್

ಎರಡನೇ ವಿಶ್ವ ಯುದ್ಧದಲ್ಲಿ(2nd world war) ಹೋರಾಡಿದ ಬದುಕುಳಿದವರಲ್ಲಿ ಕೊನೆಯ ಸಿಖ್ ಸೈನಿಕ ರಾಜೀಂದರ್ ಸಿಂಗ್ ದತ್ತ್ ರನ್ನು ಬ್ರಿಟನ್ ಪ್ರಧಾನ ಮಂತ್ರಿ ರಿಶಿ ಸುನಕ್(Rishi Sunak) ಅವರು ಲಂಡನ್ ನಲ್ಲಿರುವ ತಮ್ಮ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಸಮಾರಂಭದಲ್ಲಿ ಪಾಯಿಂಟ್ಸ್ ಆಫ್ ಲೈಟ್ ಪದವಿ ಗೌರವದೊಂದಿಗೆ ಸನ್ಮಾನಿಸಿದ್ದಾರೆ

ಲಂಡನ್: ಎರಡನೇ ವಿಶ್ವ ಯುದ್ಧದಲ್ಲಿ(2nd world war) ಹೋರಾಡಿದ ಬದುಕುಳಿದವರಲ್ಲಿ ಕೊನೆಯ ಸಿಖ್ ಸೈನಿಕ ರಾಜೀಂದರ್ ಸಿಂಗ್ ದತ್ತ್ ರನ್ನು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್(Rishi Sunak) ಅವರು ಲಂಡನ್ ನಲ್ಲಿರುವ ತಮ್ಮ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಸಮಾರಂಭದಲ್ಲಿ ಪಾಯಿಂಟ್ಸ್ ಆಫ್ ಲೈಟ್ ಪದವಿ ಗೌರವದೊಂದಿಗೆ ಸನ್ಮಾನಿಸಿದ್ದಾರೆ. 

101 ವರ್ಷದ ದತ್ತ್ ಅವರು ಸೇನೆಗೆ ನೀಡಿರುವ ಸೇವೆ "ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ"ದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ದತ್ತ್ ಅವರು ಬ್ರಿಟನ್ ಮತ್ತು ಭಾರತೀಯ ಮಾಜಿ ಸೈನಿಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

1963ನೇ ಇಸವಿಯಿಂದ ನೈಋತ್ಯ ಲಂಡನ್‌ನ ಹೌನ್ಸ್ಲೋದಲ್ಲಿ ನೆಲೆಸಿರುವ ದತ್ತ್, 1921 ರಲ್ಲಿ ವಿಭಜನೆ ಪೂರ್ವ ಭಾರತದಲ್ಲಿ ಜನಿಸಿದ್ದರು. ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಿತ್ರ ಸೇನೆಗಳೊಂದಿಗೆ ಹೋರಾಡಿದ್ದರು. 

"ಬ್ರಿಟನ್ ಪ್ರಧಾನಿ ಅವರಿಂದ ಈ ಮನ್ನಣೆಯನ್ನು ಪಡೆಯುತ್ತಿರುವುದು ಅಪಾರ ಗೌರವವಾಗಿದ್ದು ಸಂತೋಷವಾಗುತ್ತಿದೆ. 'ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ'ದ ಪ್ರಾಮುಖ್ಯತೆ ಮತ್ತು ಪ್ರಭಾವವನ್ನು ಮನಗಂಡಿದ್ದಕ್ಕಾಗಿ ಅವರಿಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ'' ಎಂದು ದತ್ತ್ ಹೇಳುತ್ತಾರೆ.

ಮಾಜಿ ಸೈನಿಕನಾಗಿ ಈ ಸಂಘವನ್ನು ಕರ್ತವ್ಯವೆಂದು ಮನಗಂಡು ಏಕತೆ, ಬೆಂಬಲ ಮತ್ತು ಸೌಹಾರ್ದತೆಯನ್ನು ಬೆಳೆಸುವ ದೃಷ್ಟಿಯಿಂದ ಸ್ಥಾಪಿಸಿದ್ದೆವು. ಈ ಪ್ರಶಸ್ತಿಯು ಹಲವಾರು ವರ್ಷಗಳಿಂದ ಸಂಘದ ಯಶಸ್ಸು ಮತ್ತು ಬೆಳವಣಿಗೆಗೆ ಕಾರಣರಾದ ಅಸಂಖ್ಯಾತ ವ್ಯಕ್ತಿಗಳ ಅವಿರತ ಶ್ರಮಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಎರಡನೆಯ ವಿಶ್ವ ಮಹಾಯುದ್ಧದ ಸಮಯದಲ್ಲಿ ದತ್ತ್ ಬ್ರಿಟಿಷ್ ಭಾರತೀಯ ಸೇನೆಗೆ ಸೇರಿದರು. 1943 ರಲ್ಲಿ ಹವಿಲ್ದಾರ್ ಮೇಜರ್ (Sergeant Major) ಆಗಿ ಬಡ್ತಿ ಪಡೆದರು.ಯುದ್ಧದ ನಂತರ, ದತ್ತ್ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸುವ ಮೊದಲು ಭಾರತಕ್ಕೆ ಮರಳಿದರು.

ತಮ್ಮ 102 ನೇ ಹುಟ್ಟುಹಬ್ಬದ ಸಮೀಪದಲ್ಲಿರುವ ಸಂದರ್ಭದಲ್ಲಿ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಲು ಈ ಪ್ರಶಸ್ತಿಯು ಅರ್ಥಪೂರ್ಣವಾಗಿದೆ ಎಂದು ದತ್ತ್ ಹೇಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT