ವಿದೇಶ

ಅಮೆಜಾನ್‌: ವಿಮಾನ ಅಪಘಾತ, ಎರಡು ವಾರಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು!

Nagaraja AB

ಬೊಗೊಟ್: ಕೊಲಂಬಿಯಾದ ಅಮೆಜಾನ್‌ನಲ್ಲಿ  ಎರಡು ವಾರಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದ ನಂತರ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಈ ಸುದ್ದಿ ಹಂಚಿಕೊಂಡಿರುವ ಪೆಟ್ರೋ, ಇದು ದೇಶಕ್ಕೆ ಸಂತೋಷವನ್ನುಂಟು ಮಾಡಿದೆ. ಸೈನಿಕರು ಕಠಿಣವಾಗಿ ಹುಡುಕಾಟ ಪ್ರಯತ್ನ ನಡೆಸಿದ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆ ಎಂದು  ಅವರು ಹೇಳಿದ್ದಾರೆ. 

ಮೇ 1 ರಂದು ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಮಕ್ಕಳನ್ನು ಹುಡುಕಲು 100 ಕ್ಕೂ ಹೆಚ್ಚು ಸೈನಿಕರು ಮತ್ತು ಸ್ನಿಫರ್ ಡಾಗ್‌ಗಳನ್ನು ಅಧಿಕಾರಿಗಳು ನಿಯೋಜಿಸಿದ್ದರು. ವಿಮಾನ ಅಪಘಾತದಲ್ಲಿ ಮೂವರು ಹದಿಹರೆಯದವರು ಸಾವನ್ನಪ್ಪಿದ್ದರು.

ಅಪಘಾತದ ನಂತರ 11 ತಿಂಗಳ ಮಗುವಿನ ಜೊತೆಗೆ 13, 9 ಮತ್ತು 4 ವರ್ಷದ ಮಕ್ಕಳು ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನಲ್ಲಿದ್ದರು. ನಂತರ ಶಸಸ್ತ್ರ ಪಡೆಗಳು ಶೋಧ ಕಾರ್ಯ ನಡೆಸಿದಾಗ  ಅಪ್ರಾಪ್ತ ವಯಸ್ಸಿನ ಮಕ್ಕಳು ಬದುಕುಳಿದಿರುವುದು ದೃಢಪಟ್ಟಿದೆ. ಸೋಮವಾರ ಮತ್ತು ಮಂಗಳವಾರ ಪೈಲಟ್ ಹಾಗೂ ಇಬ್ಬರು ವಯಸ್ಕರ ಮೃತದೇಹವನ್ನು ಸೈನಿಕರು ಪತ್ತೆ ಮಾಡಿದ್ದರು. 

SCROLL FOR NEXT