ವಿದೇಶ

26/11 ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ಕೋರ್ಟ್ ಅನುಮೋದನೆ

Vishwanath S

ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಅನುಮೋದನೆ ನೀಡಿದೆ.

10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ತಾಜ್ ಹೋಟಲ್ ಮತ್ತು ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಿ ಆರು ಅಮೆರಿಕನ್ನರು ಸೇರಿದಂತೆ 160 ಜನರನ್ನು ಕೊಂದ ದಾಳಿಗೆ ಸಂಬಂಧಿಸಿದಂತೆ ಭಾರತದ ಹಸ್ತಾಂತರ ಕೋರಿಕೆಯ ಮೇರೆಗೆ ರಾಣಾನನ್ನು ಯುಎಸ್‌ನಲ್ಲಿ ಬಂಧಿಸಲಾಯಿತು. ಆತನನ್ನು ಹಸ್ತಾಂತರಿಸುವಂತೆ US ಸರ್ಕಾರದ ಮೂಲಕ ಭಾರತೀಯ ಮನವಿಗೆ US ನ್ಯಾಯಾಲಯವು ಸಮ್ಮತಿಸಿದೆ. 

ದಾಳಿಗೆ ಸಂಬಂಧಿಸಿದಂತೆ ಪ್ರಸ್ತುತಪಡಿಸಿದ ಎಲ್ಲಾ ದಾಖಲೆಗಳನ್ನು ಮತ್ತು ವಿಚಾರಣೆಯಲ್ಲಿ ಮಂಡಿಸಿದ ವಾದಗಳನ್ನು ಪರಿಶೀಲಿಸಿ, ಪರಿಗಣಿ ನಂತರ ಅನುಮೋದನೆ ನೀಡಿದೆ.

ತಹವ್ವುರ್ ರಾಣಾ ಅವರ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, 'ದಾವೂದ್ ಗೀಲಾನಿ' ಮತ್ತು ಇತರರೊಂದಿಗೆ ಮುಂಬೈನಲ್ಲಿ ಎಲ್ಇಟಿ ಭಯೋತ್ಪಾದಕ ದಾಳಿಯನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಿದ್ದಾರೆ ಎಂದು ಭಾರತ ಸರ್ಕಾರದಿಂದ ಆರೋಪಿಸಿತ್ತು.

ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ಲಷ್ಕರ್-ಎ-ತೊಯ್ಬಾಗೆ ವಸ್ತು ಬೆಂಬಲವನ್ನು ನೀಡಿದ ಮತ್ತು 2005ರಲ್ಲಿ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಮುದ್ರಿಸಿದ ಡ್ಯಾನಿಶ್ ಪತ್ರಿಕೆಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಕ್ಕಾಗಿ ರಾಣಾನನ್ನು 2011ರಲ್ಲಿ ಚಿಕಾಗೋದಲ್ಲಿ ದೋಷಿ ಎಂದು ಘೋಷಿಸಲಾಗಿತ್ತು.

SCROLL FOR NEXT