ವಿದೇಶ

ಹರಾಜಿನಲ್ಲಿ 70 ಮಿಲಿಯನ್ ರೂಪಾಯಿ ಬೆಲೆಗೆ ಒಂದು ಮೀನು ಮಾರಾಟ: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಕ್ ಮೀನುಗಾರ!

Nagaraja AB

ಕರಾಚಿ: ಪಾಕಿಸ್ತಾನದ ಕರಾಚಿ ನಗರದಲ್ಲಿ ಮೀನುಗಾರರೊಬ್ಬರು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನು ಒಂದನ್ನು ಹರಾಜು ಹಾಕಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. 

ಹೌದು, ಇಬ್ರಾಹಿಂ ಹೈದರಿ ಎಂಬ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ತಂಡ ಸೋಮವಾರ ಅರಬ್ಬಿ ಸಮುದ್ರದಿಂದ ಸ್ಥಳೀಯ ಉಪಭಾಷೆಯಲ್ಲಿ ಗೋಲ್ಡನ್ ಫಿಶ್ ಅಥವಾ ಸೋವಾ ಎಂದು ಕರೆಯಲ್ಪಡುವ ಮೀನನ್ನು ಹಿಡಿದಿದ್ದಾರೆ.

ಶುಕ್ರವಾರ ಬೆಳಗ್ಗೆ ಕರಾಚಿ ಬಂದರಿನಲ್ಲಿ  ಹರಾಜು ಹಾಕಿದಾಗ ಒಂದು ಮೀನು ಸುಮಾರು 70 ಮಿಲಿಯನ್ ರೂಪಾಯಿಗಳಿಗೆ ಮಾರಾಟವಾಯಿತು ಎಂದು ಪಾಕಿಸ್ತಾನದ ಮೀನುಗಾರರ ಜಾನಪದ ವೇದಿಕೆಯ ಮುಬಾರಕ್ ಖಾನ್ ಹೇಳಿದ್ದಾರೆ.

ಸೋವಾ ಮೀನು ಬೆಲೆಬಾಳುವ ಮತ್ತು ಅಪರೂಪದ ಮೀನು ಆಗಿದೆ. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಉತ್ತಮ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಒಂದು ಮೀನು ಹರಾಜಿನಲ್ಲಿ ಸುಮಾರು 7 ಮಿಲಿಯನ್ ರೂಪಾಯಿಗೆ ಮಾರಾಟವಾಯಿತು ಎಂದು ಬಲೋಚ್ ಹೇಳಿದರು.

ಸಾಮಾನ್ಯವಾಗಿ 20 ರಿಂದ 40 ಕೆಜಿ ತೂಕದ ಮತ್ತು 1.5 ಮೀಟರ್ ವರೆಗೆ ಬೆಳೆಯುವ ಈ ಮೀನಿಗೆ ಪೂರ್ವ ಏಷ್ಯಾದ ದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ. ಹರಾಜಿನಿಂದ ಬಂದಂತಹ ಹಣವನ್ನು ತನ್ನ ಏಳು ಜನರ ತಂಡದೊಂದಿಗೆ ಹಂಚಿಕೊಳ್ಳುವುದಾಗಿ ಹಾಜಿ ಹೇಳಿದರು. 

SCROLL FOR NEXT