ಹೌತಿ ಬಂಡುಕೋರರಿಂದ ಭಾರತ ಮೂಲದ ಹಡಗಿನ ಅಪಹರಣ 
ವಿದೇಶ

ಹೌತಿ ಬಂಡುಕೋರರಿಂದ ಭಾರತ ಮೂಲದ ಹಡಗಿನ ಅಪಹರಣ: ಇಸ್ರೇಲ್

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ (India bound Ship) ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು (Yemen Houthi Rebels) ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ(Ship Hijack) ಎಂದು ಇಸ್ರೇಲ್ ಹೇಳಿದೆ. 

ನವದೆಹಲಿ: ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ (India bound Ship) ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು (Yemen Houthi Rebels) ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ(Ship Hijack) ಎಂದು ಇಸ್ರೇಲ್ ಹೇಳಿದೆ. 

ಹೌದು.. ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ (India bound Ship) ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು (Yemen Houthi Rebels) ಕೆಂಪು ಸಮುದ್ರದಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದಾರೆ. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ ಹೌತಿಗಳ ಹೇಳಿಕೆಯನ್ನು ನಿರಾಕರಿಸಿರುವ ಇಸ್ರೇಲ್ ಸರ್ಕಾರ (Israel Government), ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ (Galaxy Leader) ಹಡಗಿನಲ್ಲಿ ಯಾವುದೇ ಭಾರತೀಯರು(Indians) ಇಲ್ಲ.. ಅಲ್ಲದೆ ಅದು ಇಸ್ರೇಲ್ ನ ಹಡಗಲ್ಲ ಎಂದು ಸ್ಪಷ್ಟಪಡಿಸಿದೆ.

ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆಗಳು ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಭಾರತಕ್ಕೆ ಟರ್ಕಿಯಿಂದ ಹೊರಟಿತ್ತು. ಹಡಗಿನಲ್ಲಿ ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಇದ್ದಾರೆ. ಆದರೆ ಈ ಹಡುಗು ಇಸ್ರೇಲ್‌ಗೆ ಸೇರಿದ್ದಲ್ಲ ಎಂದು ಹೇಳಿದೆ.

ಹೌತಿಗಳು ಅಪಹರಿಸಿರುವ ಹಡಗು ಇಸ್ರೇಲ್‌ಗೆ ಸೇರಿದ್ದಲ್ಲ. ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಹಡಗನ್ನು ಯೆಮೆನ್ ಹೌತಿ ಬಂಡುಕೋರರು ಇರಾನ್ ಮಾರ್ಗದರ್ಶನದಲ್ಲಿ ಅಪಹರಿಸಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕರಿಸಿರುವುದು ಖಂಡನಾರ್ಹವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT