ವಿದೇಶ

ನ್ಯೂಯಾರ್ಕ್: ಗುರುದ್ವಾರಕ್ಕೆ ಆಗಮಿಸಿದ್ದ ಭಾರತ ರಾಯಭಾರಿಯನ್ನು ಹೊರದಬ್ಬಿದ ಖಲಿಸ್ತಾನಿ ಪರ ಪ್ರಚಾರಕರು

Srinivasamurthy VN

ನ್ಯೂಯಾರ್ಕ್: ಕೆನಡಾ ಬೆನ್ನಲ್ಲೇ ಅಮೆರಿಕದಲ್ಲೂ ಖಲಿಸ್ತಾನಿ ಪರ ಪ್ರಚಾರಕರ ದುಂಡಾವರ್ತನೆ ಮುಂದುವರೆದಿದ್ದು, ಪ್ರಾರ್ಥನೆ ಸಲ್ಲಿಸಲು ಅಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಿದ್ದ ಭಾರತ ರಾಯಭಾರಿಯನ್ನು ಅಲ್ಲಿನ ಖಲಿಸ್ತಾನ ಪ್ರಚಾರಕರು ಬಲವಂತವಾಗಿ ಹೊರದಬ್ಬಿದ್ದಾರೆ.

ನೂಯಾರ್ಕ್ ನ ಲಾಂಗ್ ಐಲೆಂಡ್ ನಲ್ಲಿರುವ ಹಿಕ್ಸ್ ವಿಲ್ಲೆ ಗುರುದ್ವಾರದಲ್ಲಿ ಈ ಘಟನೆ ನಡೆದಿದ್ದು, ಭಾರತದ ಅಮೆರಿಕ ರಾಯಭಾರಿ ತರಣ್ ಜಿತ್ ಸಂಧು ಅವರು ಗುರುಪ್ರಭ್ ನಿಮಿತ್ತ ಪ್ರಾರ್ಥನೆ ಸಲ್ಲಿಸಲು ಗುರುದ್ವಾರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಖಲಿಸ್ತಾನಿ ಪರ ಪ್ರಚಾರಕರು ತರಣ್ ಜಿತ್ ರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಖಲಿಸ್ತಾನ ಉಗ್ರರಾದ ಹರ್ದೀರ್ ಸಿಂಗ್ ನಿಜ್ಜರ್ ಮತ್ತು ಗುರುಪತ್ವಂತ್ ಸಿಂಗ್ ಪನ್ನು ಪರವಾಗಿ ಘೋಷಣೆಗಳನ್ನು ಕೂಗಿದ ಖಲಿಸ್ತಾನಿ ಪ್ರಚಾರಕರು ಭಾರತದ ರಾಯಭಾರಿ ತರಣ್ ಜಿತ್ ಸಿಂಗ್ ರನ್ನು ಗುರುದ್ವಾರದಿಂದ ಬಲವಂತವಾಗಿ ಹೊರಗೆ ಕಳುಹಿಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.

ಇತ್ತ ರಾಯಭಾರಿ ಗುರುದ್ವಾರದಿಂದ ಹೊರಗೆ ಬರುತ್ತಲೇ ಅಲ್ಲಿ ನೆರೆದಿದ್ದ ಖಲಿಸ್ತಾನಿ ಪರ ಪ್ರಚಾರಕರು ಖಲಿಸ್ತಾನ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಕಂಡಿವೆ. ಇನ್ನು ಈ ಅಹಿತಕರ ಘಟನೆಗಳ ಹೊರತಾಗಿಯೂ ಅವರು ಗುರುಪ್ರಬ್ ಕುರಿತು ಸಿಖ್ ಸಮುದಾಯದವರಿಗೆ ಶುಭ ಕೋರಿದ್ದು, "ಅಫ್ಘಾನಿಸ್ತಾನ ಸೇರಿದಂತೆ ಸ್ಥಳೀಯ ಸಂಗತ್‌ಗೆ ಸೇರುವ ಸೌಭಾಗ್ಯ, ಲಾಂಗ್ ಐಲ್ಯಾಂಡ್‌ನ ಗುರುನಾನಕ್ ದರ್ಬಾರ್‌ನಲ್ಲಿ ಗುರುಪುರಬ್ ಆಚರಿಸಲು- ಕೀರ್ತನೆಗಳನ್ನು ಆಲಿಸಿ, ಗುರುನಾನಕ್ ಅವರ ಒಗ್ಗಟ್ಟಿನ, ಏಕತೆ ಮತ್ತು ಸಮಾನತೆಯ ಶಾಶ್ವತ ಸಂದೇಶದ ಬಗ್ಗೆ ಮಾತನಾಡಿ ಲಾಂಗಾರ್‌ನಲ್ಲಿ ಭಾಗವಹಿಸಿದರು ಮತ್ತು ಎಲ್ಲರಿಗೂ ಆಶೀರ್ವಾದ ಕೋರಿದರು.

ಇತ್ತೀಚಿನ ದಿನಗಳಲ್ಲಿ ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ದೇಶಗಳಲ್ಲಿ ಖಲಿಸ್ತಾನಿ ಪರ ಪ್ರಚಾರಕರ ಕುರಿತ ಸುದ್ದಿಗಳು ವ್ಯಾಪಕವಾಗುತ್ತಿವೆ. 
 

SCROLL FOR NEXT