ವಿದೇಶ

ಗುರುದ್ವಾರ ಪ್ರವೇಶಕ್ಕೆ ರಾಯಭಾರಿಗೆ ತಡೆ: ಘಟನೆ ಖಂಡಿಸಿದ ಗುರುದ್ವಾರ ಆಡಳಿತ ಮಂಡಳಿ

Srinivasamurthy VN

ಗ್ಲ್ಯಾಸ್ಗೋ: ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಘಟನೆಗೆ ಸಂಬಂಧಿಸಿದಂತೆ ಗುರುದ್ವಾರ ಆಡಳಿತ ಮಂಡಳಿ ಖಂಡಿಸಿದೆ.

ಗ್ಲಾಸ್ಗೋ ಗುರುದ್ವಾರ, ಭಾರತೀಯ ರಾಯಭಾರಿಯನ್ನು ಖಲಿಸ್ತಾನಿ ಉಗ್ರರು ಪ್ರವೇಶಿಸದಂತೆ ತಡೆದ ಖಲಿಸ್ತಾನಿ ತೀವ್ರಗಾಮಿಗಳ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು "ಅಸ್ವಸ್ಥ ನಡವಳಿಕೆ" ಎಂದು ಹೇಳಿದೆ. ಅಲ್ಲದೆ ಗುರುದ್ವಾರವು ಎಲ್ಲಾ ಸಮುದಾಯಗಳು ಮತ್ತು ಹಿನ್ನೆಲೆಯ ಜನರಿಗೆ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಹೇಳಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗುರುದ್ವಾರ, "29 ಸೆಪ್ಟೆಂಬರ್ 2023 ರಂದು ಗ್ಲಾಸ್ಗೋ ಗುರುದ್ವಾರದಲ್ಲಿ ಭಾರತೀಯ ಹೈಕಮಿಷನರ್ ವೈಯಕ್ತಿಕ ಭೇಟಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ, ಗುರುದ್ವಾರ ಪ್ರದೇಶದ ಹೊರಗಿನ ಕೆಲವು ಅಪರಿಚಿತ ವ್ಯಕ್ತಿಗಳು ಈ ಭೇಟಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಈ ನಡವಳಿಕೆ ಸರಿಯಲ್ಲ. ಗುರುದ್ವಾರವು ಎಲ್ಲಾ ಸಮುದಾಯಗಳು ಮತ್ತು ಹಿನ್ನೆಲೆಯ ಜನರಿಗೆ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. 

ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆಯಲಾಗಿತ್ತು. ಹೀಗಾಗಿ ಖಲಿಸ್ತಾನಿ ತೀವ್ರಗಾಮಿಗಳೊಂದಿಗೆ ವಾಗ್ವಾದಕ್ಕೆ ಇಳಿಯದ ಭಾರತೀಯ ರಾಯಭಾರಿ ದೊರೈಸ್ವಾಮಿ ಅವರು ವಾಪಸ್ ತೆರಳಲು ನಿರ್ಧರಿಸಿದರು. 
 

SCROLL FOR NEXT