ರಾಕೆಟ್ ದಾಳಿ. 
ವಿದೇಶ

ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್‌ ದಾಳಿ: ಕೆರಳಿದ ಇಸ್ರೇಲ್‌ನಿಂದ ಯುದ್ಧ ಘೋಷಣೆ

ಪ್ಯಾಲೆಸ್ತೀನ್ ದಾಳಿಕೋರರು ಗಾಜಾದಿಂದ ಇಸ್ರೇಲ್ ಕಡೆಗೆ ಶನಿವಾರ ಬೆಳಗ್ಗೆ ರಾಕೆಟ್‌ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ, ಹಲವು ಗಾಯಗೊಂಡಿದ್ದಾರೆ.

ಟೆಲ್ ಅವಿವ್ (ಇಸ್ರೇಲ್): ಪ್ಯಾಲೆಸ್ತೀನ್ ದಾಳಿಕೋರರು ಗಾಜಾದಿಂದ ಇಸ್ರೇಲ್ ಕಡೆಗೆ ಶನಿವಾರ ಬೆಳಗ್ಗೆ ರಾಕೆಟ್‌ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ, ಹಲವು ಗಾಯಗೊಂಡಿದ್ದಾರೆ.

ಗಾಜಾ ಪಟ್ಟಿಯಿಂದ ಇಸ್ರೇಲ್‌ನ ಅನೇಕ ವಸತಿ ಪ್ರದೇಶಗಳ ಮೇಲೆ ರಾಕೆಟ್‌ಗಳನ್ನು ಹಾರಿಸಲಾಗಿದೆ. ರಾಜಧಾನಿ ಟೆಲ್ ಅವಿವ್‌ ಸೇರಿದಂತೆ ಅನೇಕ ಕಡೆ ಸೈರನ್‌ ಸಹಾಯದಿಂದ ವೈಮಾನಿಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಭಾರಿ ಒಳನುಸುಳುವಿಕೆ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಇಂದು ಮುಂಜಾನೆ ನಡೆದ ಈ ಬಾಂಬ್ ದಾಳಿಯು ಸುಮಾರು 30 ನಿಮಿಷಗಳ ಕಾಲ ನಡೆಯಿತು. ದಕ್ಷಿಣ ಇಸ್ರೇಲ್‌ನ ಕಟ್ಟಡವೊಂದರ ಮೇಲೆ ರಾಕೆಟ್ ಬಿದ್ದ ಪರಿಣಾಮ 70 ವರ್ಷದ ಮಹಿಳೆ ಸೇರಿ ನಾಲ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ತಿಳಿಸಿದೆ.

ಗಾಜಾ ಪಟ್ಟಿಯಿಂದ ಸುಮಾರು 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಟೆಲ್ ಅವಿವ್‌ನಲ್ಲಿ ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನೊಂದೆಡೆ, ವೈಮಾನಿಕ ದಾಳಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಇಸ್ರೇಲ್​ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಅವೀವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಗೆ ತೆರಳಿದ್ದು, ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಈ ನಡುವೆ ದಾಳಿಗೆ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಸ್ಟೇಟ್ ಆಫ್ ವಾರ್ ಘೋಷಣೆ ಮಾಡಿದೆ. ಬಾಂಬ್ ಸೆಲ್ಟರ್‌ಗಳಲ್ಲಿ ಆಶ್ರಯ ಪಡೆಯಿರಿ ಎಂದು ತನ್ನ ನಾಗರಿಕರಿಗೆ ಹೇಳಿದೆ.

ಕಳೆದ ಮೇ ತಿಂಗಳಲ್ಲಿ ಕೂಡ ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್​​ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. ಇಸ್ರೇಲ್​ ಸೇನೆ ಗಾಜಾದ ಮೇಲೆ ಬಾಂಬ್​ ದಾಳಿ ಮಾಡಿತ್ತು. ಪರಿಣಾಮ ಪ್ಯಾಲೆಸ್ಟೀನ್​ ಇಸ್ಲಾಮಿಕ್​ ಜಿಹಾದ್​ ಚಳವಳಿಯ ಮೂವರು ಹತ್ಯೆಯಾಗಿದ್ದರು.

ಉತ್ತರ ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್‌ ಕಮಾಂಡರ್ ಖಲೀಲ್ ಬಹಿತಿನಿ, ಗುಂಪಿನ ಮಿಲಿಟರಿ ಕೌನ್ಸಿಲ್‌ನ ಉನ್ನತ ಅಧಿಕಾರಿ ಜಾಹೆದ್ ಅಹ್ನಮ್ ಮತ್ತು ತಾರೆಕ್ ಅಜಾಲ್ದಿನ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲಿ ಸೇನೆ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು. ಅಷ್ಟೇ ಅಲ್ಲದೆ, ದಾಳಿಯಲ್ಲಿ 15 ನಾಗರಿಕರು ಸೇರಿದಂತೆ 28 ಪ್ಯಾಲೆಸ್ತೀನಿಯರು ಅಸುನೀಗಿದ್ದರು. ಹಾಗೆಯೇ, 93 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿರುವ ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ