ವಿದೇಶ

'ಮೊದಲಿನಿಂದಲೂ ಭಾರತದ ಮೇಲೆ ಅನುಮಾನವಿತ್ತು.. ಈಗ ನಿಜವಾಯಿತು': ಕೊಲೆಗೀಡಾದ ಖಲಿಸ್ತಾನಿ ಮುಖಂಡ ನಿಜ್ಜರ್ ಪುತ್ರನ ಹೇಳಿಕೆ

Srinivasamurthy VN

ನವದೆಹಲಿ: ತಮ್ಮ ತಂದೆಯ ಸಾವಿನ ವಿಚಾರವಾಗಿ ಮೊದಲಿನಿಂದಲೂ ಭಾರತದ ಮೇಲೆ ಅನುಮಾನವಿತ್ತು.. ಈಗ ನಿಜವಾಯಿತು ಎಂದು ಕೊಲೆಗೀಡಾದ ಖಲಿಸ್ತಾನಿ ಹೋರಾಟಗಾರ ನಿಜ್ಜರ್ ಪುತ್ರ ಹೇಳಿಕೆ ನೀಡಿದ್ದಾನೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತುರ್ತು ಸಂಸತ್ ಅಧಿವೇಶನ ಕರೆದು ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ ಭಾರತ ಸರ್ಕಾರದ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಭಾರತ ಮತ್ತು ಕೆನಡಾ ದೇಶಗಳ ನಡುವಿನ ವೈಮನಸ್ಸು ಹೆಚ್ಚಾಗುವಂತೆ ಮಾಡಿದ್ದು, ಈಗಾಗಲೇ ಉಭಯ ದೇಶಗಳೂ ರಾಯಭಾರ ಕಚೇರಿ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿದೆ. ಇದರ ನಡುವೆಯೇ ಹರ್ದೀಪ್ ಸಿಂಗ್ ಜಜ್ಜರ್ ಸಾವಿನಲ್ಲಿ ಭಾರತದ ಕೈವಾಡದ ಕುರಿತು ಆತನ ಪುತ್ರ ಬಲರಾಜ್ ಸಿಂಗ್ ನಿಜ್ಜರ್ ಹೇಳಿಕೆ ನೀಡಿದ್ದಾರೆ.

ನಿಜ್ಜರ್ ಹತ್ಯೆಯಾದ ಬಳಿಕ ಇದೇ ಮೊದಲ ಬಾರಿಗೆ ಸಿಬಿಸಿ ಸುದ್ದಿಸಂಸ್ಛೆಯೊಂದಿಗೆ ಮಾತನಾಡಿರುವ ಬಲರಾಜ್ ಸಿಂಗ್ ನಿಜ್ಜರ್, 'ತಂದೆಯ ಸಾವಿನ ವಿಚಾರವಾಗಿ ಮೊದಲಿನಿಂದಲೂ ಭಾರತದ ಮೇಲೆ ಅನುಮಾನವಿತ್ತು.. ಈಗ ನಿಜವಾಯಿತು. ಕೆನಡಾ ಪ್ರಧಾನಿಗಳ ಹೇಳಿಕೆ ತಮ್ಮ ತಂದೆಯ ಸಾವಿಗೆ ನ್ಯಾಯ ದೊರೆಯುವ ವಿಶ್ವಾಸ ಮೂಡಿಸಿದೆ. ಇದು ಕೇವಲ ಆರಂಭವಷ್ಟೇ.. ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ವಿಚಾರಗಳು ಹೊರಬರಲಿವೆ. ಕೆನಡಾ ಪ್ರಧಾನಿಯವರ ಹೇಳಿಕೆ ಬಳಿಕ ಸತ್ಯಾಂಶ ಸಾರ್ವಜನಿಕವಾಗಿದೆ. ಹೌಸ್ ಆಫ್ ಕಾಮನ್ಸ್‌ನಲ್ಲಿ ಹತ್ಯೆಯನ್ನು ಖಂಡಿಸಿದ ಟ್ರುಡೊ, ಹಾಗೆಯೇ ಫೆಡರಲ್ ಕನ್ಸರ್ವೇಟಿವ್ ನಾಯಕ ಪಿಯರೆ ಪೊಯ್ಲಿವ್ರೆ ಮತ್ತು ಎನ್‌ಡಿಪಿ ನಾಯಕ ಜಗ್ಮೀತ್ ಸಿಂಗ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು 21 ವರ್ಷದ ಬಲರಾಜ್ ಸಿಂಗ್ ನಿಜ್ಜರ್ ಹೇಳಿದ್ದಾರೆ.

ಅಂತೆಯೇ ನೀವು ಇದನ್ನೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗುವ ವಿಶ್ವಾಸ ನಮಗಿದೆ. ಇದರಿಂದ ಇನ್ನಷ್ಟು ಸತ್ಯಾಂಶಗಳು ಹೊರಬಹುದು. ನೀವು ನಿರ್ಬಂಧಗಳನ್ನು ವಿಧಿಸಿದರೆ, ಮುಂದಿನ ಹಂತಗಳು ಏನೇ ಇರಲಿ, ಅದು ಏನೆಂದು ನೋಡಲು ನಾವು ಒಂದು ಕುಟುಂಬವಾಗಿ ಕಾಯುತ್ತಿದ್ದೇವೆ" ಎಂದು ನಿಜ್ಜರ್ ಹೇಳಿದ್ದಾರೆ.

SCROLL FOR NEXT