ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ 
ವಿದೇಶ

ಬಾಂಗ್ಲಾದೇಶ: ಪ್ರಧಾನಿ ಹಸೀನಾ ರಾಜೀನಾಮೆ; 'ಸುರಕ್ಷಿತ ಸ್ಥಳ'ಕ್ಕೆ ಪ್ರಯಾಣ; ದೇಶ ಸೇನೆ ವಶಕ್ಕೆ!

ಬೇರೆ ಸರ್ಕಾರ ರಚನೆಯಾಗದಂತೆ ತಡೆಯುವಂತೆ ಭದ್ರತಾ ಪಡೆಗಳನ್ನು ಹಸೀನಾ ಅವರ ಸಜೀಬ್ ವಾಝೆದ್ ಜಾಯ್ ಒತ್ತಾಯಿಸಿದ್ದಾರೆ.

ಢಾಕಾ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ನಿಗ್ನತೆ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು 'ಸುರಕ್ಷಿತ ಸ್ಥಳ'ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ. ಹಸೀನಾ ಆಡಳಿತದ ಮೇಲೆ ಹೆಚ್ಚುತ್ತಿರುವ ಅಶಾಂತಿ ಮತ್ತು ಒತ್ತಡದ ಮಧ್ಯೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಢಾಕಾ ಅರಮನೆಯನ್ನು ತೊರೆದು ಸುರಕ್ಷತೆಗಾಗಿ ಭಾರತದಲ್ಲಿನ ತ್ರಿಪುರಾದ ಅಗರ್ತಲಾಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಚುನಾಯಿತವಾಗದ ಸರ್ಕಾರ ತಡೆಗೆ ಭದ್ರತಾ ಪಡೆಗಳಿಗೆ ಬಾಂಗ್ಲಾ ಪ್ರಧಾನಿ ಪುತ್ರನ ಒತ್ತಾಯ: ಲಕ್ಷಾಂತರ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ಬೇರೆ ಸರ್ಕಾರ ರಚನೆಯಾಗದಂತೆ ತಡೆಯುವಂತೆ ಭದ್ರತಾ ಪಡೆಗಳನ್ನು ಹಸೀನಾ ಅವರ ಸಜೀಬ್ ವಾಝೆದ್ ಜಾಯ್ ಒತ್ತಾಯಿಸಿದ್ದಾರೆ.

ಜನರನ್ನು ಸುರಕ್ಷಿತವಾಗಿರಿಸುವುದು, ನಮ್ಮ ದೇಶವನ್ನು ಸುರಕ್ಷಿತವಾಗಿರಿಸುವುದು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯ ಎಂದು ಯುಎಸ್ ಮೂಲದ ಜಾಯ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಯಾವುದೇ ಚುನಾಯಿತವಾಗದ ಸರ್ಕಾರವನ್ನು ಒಂದು ನಿಮಿಷವೂ ಅಧಿಕಾರಕ್ಕೆ ಬರಲು ಬಿಡಬೇಡಿ, ಅದು ನಿಮ್ಮ ಕರ್ತವ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಶೇಕ್ ಹಸೀನಾ ಅವರನ್ನು ಅಧಿಕಾರದಿಂದ ಬಲವಂತವಾಗಿ ಹೊರಹಾಕಿದರೆ ಬಾಂಗ್ಲಾದೇಶದ ಪ್ರಗತಿಗೆ ಧಕ್ಕೆಯಾಗಬಹುದು ಎಂದು ತನ್ನ ತಾಯಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಜಾಯ್ ಎಚ್ಚರಿಸಿದ್ದಾರೆ. "ನಮ್ಮ ಅಭಿವೃದ್ಧಿ ಮತ್ತು ಪ್ರಗತಿ ಎಲ್ಲವೂ ಕಣ್ಮರೆಯಾಗುತ್ತದೆ. ಬಾಂಗ್ಲಾದೇಶವು ಅಲ್ಲಿಂದ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಬಿಕ್ಕಟ್ಟಿನಲ್ಲಿ ಮಿಲಿಟರಿ ಪಾತ್ರ: ಈ ಉದ್ವಿಗ್ನತೆಗಳ ನಡುವೆ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಿದ್ಧರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ನಾಗರಿಕ ಸೇವಾ ಉದ್ಯೋಗ ಮೀಸಲಾತಿ ವಿರುದ್ಧ ಕಳೆದ ತಿಂಗಳು ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿಯಲ್ಲಿ ತೀವ್ರ ಅಶಾಂತಿಯಾಗಿ ಉಲ್ಬಣಗೊಂಡಿದೆ. ಅವರ ರಾಜೀನಾಮೆಗಾಗಿ ವ್ಯಾಪಕ ಒತ್ತಾಯ ಕೇಳಿಬರುತ್ತಿದೆ.

ಪ್ರಸ್ತುತ ಪರಿಸ್ಥಿತಿಯು ಬಾಂಗ್ಲಾದೇಶದಲ್ಲಿ ಹಿಂದಿನ ರಾಜಕೀಯ ಪ್ರಕ್ಷುಬ್ಧತೆಯನ್ನು ನೆನಪಿಸುತ್ತಿದೆ. ಜನವರಿ 2007 ರಲ್ಲಿ ವ್ಯಾಪಕ ಅಶಾಂತಿಯ ನಂತರ ಸೇನೆ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಎರಡು ವರ್ಷಗಳ ಕಾಲ ಉಸ್ತುವಾರಿ ಸರ್ಕಾರವನ್ನು ರಚಿಸಿತ್ತು. ರಾಷ್ಟ್ರವು ಮುಂದಿನ ಬೆಳವಣಿಗೆಗಳಿಗಾಗಿ ಕಾಯುತ್ತಿರುವಾಗ ಶೇಖ್ ಹಸೀನಾ ಅವರ ನಾಯಕತ್ವದ ಸುತ್ತಲಿನ ಅನಿಶ್ಚಿತತೆಯು ಬೆಳೆಯುತ್ತಲೇ ಇದೆ. ಬಾಂಗ್ಲಾದೇಶ ತನ್ನ ರಾಜಕೀಯ ಇತಿಹಾಸದಲ್ಲಿ ಈ ನಿರ್ಣಾಯಕ ಘಟ್ಟವನ್ನು ಮೆಟ್ಟಿ ನಿಲ್ಲುವುದನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

SCROLL FOR NEXT