ಫ್ರಾನ್ಸ್ ಸರ್ಕಾರ ಪತನ 
ವಿದೇಶ

France ನಲ್ಲಿ ರಾಜಕೀಯ ಕೋಲಾಹಲ: ವಿಶ್ವಾಸಮತ ಸೋತ ಪ್ರಧಾನಿ, ರಾಜಿನಾಮೆ ಸಾಧ್ಯತೆ

ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.

ಪ್ಯಾರಿಸ್: ಕುತೂಹಲಕಾರಿ ಬೆಳವಣಿಗೆಯಲ್ಲಿ ಫ್ರಾನ್ಸ್ ನಲ್ಲಿ ಪ್ರಧಾನಿ ಮೈಕೆಲ್ ಬರ್ನಿಯರ್ ಸರ್ಕಾರ ಪತನವಾಗಿದ್ದು, ಇಂದು ನಡೆದ ಅವಿಶ್ವಾಸ ನಿರ್ಣಯದಲ್ಲಿ ಬಹುಮತ ಪಡೆಯುವಲ್ಲಿ ಮೈಕೆಲ್ ಬರ್ನಿಯರ್ ವಿಫಲರಾಗಿದ್ದಾರೆ.

ಹೌದು.. ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ. ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಮೈಕೆಲ್ ಬರ್ನಿಯರ್ ಪದಚ್ಯುತಗೊಂಡ ನಂತರ ಫ್ರಾನ್ಸ್ ಸರ್ಕಾರ ಪತನಗೊಂಡಿದೆ.

ಸಂಸದರು ಅವರ ವಿರುದ್ಧದ ನಿರ್ಣಯವನ್ನು ಬೆಂಬಲಿಸಲು ಅಗಾಧವಾಗಿ ಮತ ಹಾಕಿದ್ದು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನೇಮಕಗೊಂಡ ಕೇವಲ ಮೂರು ತಿಂಗಳ ಅವಧಿಯಲ್ಲೇ ಮೈಕೆಲ್ ಬರ್ನಿಯರ್ ಪತನಗೊಂಡಿದೆ.

ಫ್ರಾನ್ಸ್‌ ಸಂಸತ್ತಿನ ಕೆಳಮನೆಯಲ್ಲಿ 331 ಸಂಸದರು ಅವಿಶ್ವಾಸಮತ ನಿರ್ಣಯದ ಪರ ಮತ ಚಲಾಯಿಸಿದ್ದು, ಈ ನಿರ್ಣಯ ಅಂಗೀಕಾರಗೊಳ್ಳಲು ಕನಿಷ್ಠ 288 ಮತಗಳ ಅಗತ್ಯವಿದೆ. ಇದರಿಂದಾಗಿ, ಅಧಿಕಾರಕ್ಕೇರಿದ ಮೂರೇ ತಿಂಗಳಲ್ಲಿ ಬರ್ನಿಯರ್ ಅವರು ರಾಜೀನಾಮೆ ನೀಡುವಂತಾಗಿದೆ.

ಫ್ರಾನ್ಸ್ ರಾಜಕೀಯ ಕೋಲಾಹಲಕ್ಕೆ ಕಾರಣವೇನು?

ಸಾಲದ ಹೊರೆಯಿಂದ ಕಂಗೆಟ್ಟಿರುವ ಫ್ರಾನ್ಸ್‌, ಸ್ಥಿರ ಬೆಳವಣಿಗೆ ಸಾಧಿಸಲು ಶ್ರಮಿಸುತ್ತಿರುವ ಹೊತ್ತಿನಲ್ಲೇ ಸರ್ಕಾರ ಪತನಗೊಳ್ಳುತ್ತಿದೆ. ಆದಾಗ್ಯೂ, ಎಮ್ಯಾನುವೆಲ್‌ ಮ್ಯಾಕ್ರನ್‌ ಅವರು ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ. ಆದರೆ, ಅವರಿಗೂ ಬೆಂಬಲ ಅಸ್ಥಿರವಾಗಿದೆ. ಮ್ಯಾಕ್ರನ್‌ ನೂತನ ಪ್ರಧಾನಿಯನ್ನು ಹೆಸರಿಸುವವರೆಗೆ ಬರ್ನಿಯರ್‌ ಅವರೇ ಉಸ್ತುವಾರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.

ಫ್ರಾನ್ಸ್ ಸಂಸತ್ತಿಗೆ ಇದೇ ವರ್ಷ ಜುಲೈನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕಿರಲಿಲ್ಲ. ಇದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡನೇ ಮಹಾಯುದ್ಧದ ಬಳಿಕ ಫ್ರಾನ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿದೆ. 1962ರ ನಂತರ ಅವಿಶ್ವಾಸ ಮತದಲ್ಲಿ ದೇಶದ ಸರ್ಕಾರ ಪತನಗೊಂಡಿರುವುದು ಇದೇ ಮೊದಲು.

ಅಂದಹಾಗೆ ಬರ್ನಿಯರ್‌ಗೂ ಮುನ್ನ ಪ್ರಧಾನಿಯಾಗಿದ್ದ ಗೇಬ್ರಿಯಲ್ ಅಟ್ಟಲ್, 2024ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಅಧಿಕಾರದಲ್ಲಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT