ಬಾಹ್ಯಾಕಾಶ ನಿಲ್ದಾಣದಲ್ಲಿ ಕ್ರಿಸ್ ಮಸ್ ಆಚರಣೆ ಮಾಡಿದ ಸುನಿತಾ ವಿಲಿಯಮ್ಸ್ ತಂಡ  online desk
ವಿದೇಶ

ISS ನಲ್ಲಿ Sunita Williams Christmas ಆಚರಣೆ; 8 ದಿನಕ್ಕಾಗಿ ತೆರಳಿದವರ ಬಳಿ ಸಂಟಾ ಕ್ಲಾಸ್ ಟೋಪಿ ಹೇಗೆ ಬಂತು?: ನೆಟ್ಟಿಗರ ಪ್ರಶ್ನೆ

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಈಗ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಗಗನಯಾತ್ರಿಗಳ ತಂಡ ಸಂತಾಕ್ಲಾಸ್ ಟೋಪಿ ಧರಿಸಿ ಅಲ್ಲಿಂದಲೇ ಎಲ್ಲರಿಗೂ ಕ್ರಿಸ್ ಮಸ್ ಶುಭಾಶಯ ಕೋರಿದ್ದಾರೆ.

ಭಾರತೀಯ ಮೂಲದ ಅಮೆರಿಕನ್‌ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರ ತಂಡ ಬಾಹ್ಯಾಕಾಶ ನಿಲ್ದಾಣದಲ್ಲೇ ಕ್ರಿಸ್ ಮಸ್ ಆಚರಣೆ ಮಾಡಿರುವುದು ಆನ್ ಲೈನ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ.

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಈಗ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಗಗನಯಾತ್ರಿಗಳ ತಂಡ ಸಂತಾಕ್ಲಾಸ್ ಟೋಪಿ ಧರಿಸಿ ಅಲ್ಲಿಂದಲೇ ಎಲ್ಲರಿಗೂ ಕ್ರಿಸ್ ಮಸ್ ಶುಭಾಶಯ ಕೋರಿದ್ದಾರೆ.

ಈ ಪೋಸ್ಟ್ ನ್ನು ಗಮನಿಸಿದ ನೆಟ್ಟಿಗರು ಹಲವು conspiracy theoryಗಳನ್ನು ತೇಲಿಬಿಟ್ಟಿದ್ದಾರೆ. ನಾಸಾ ಹಂಚಿಕೊಂಡಿರುವ ವಿಡಿಯೋದಲ್ಲಿ ಸುನಿತಾ ವಿಲಿಯಮ್ಸ್ ಕೆಂಪು ಬಣ್ಣದ ಟಿ-ಶರ್ಟ್ ಧರಿಸಿದ್ದು, ಆಕೆಯ ಮೂವರು ಸಹೋದ್ಯೋಗಿಗಳು ಸಂತಾಕ್ಲಾಸ್ ಟೋಪಿ ಧರಿಸಿದ್ದಾರೆ.

ಇದನ್ನು ಕಂಡ ನೆಟ್ಟಿಗರು, ಓಹ್ ಇಷ್ಟು ದೀರ್ಘಾವಧಿ ಬಾಹ್ಯಾಕಾಶದಲ್ಲೇ ಇರುವ ಯೋಜನೆ ಇತ್ತಾ? ನೀವು ಕ್ರಿಸ್ ಮಸ್ ಗಾಗಿ ಅಲಂಕಾರಿಕ ವಸ್ತುಗಳನ್ನು ಹಲವು ತಿಂಗಳ ಹಿಂದೆಯೇ ಕೊಂಡೊಯ್ದಿದ್ದೀರ? 8 ದಿನಗಳ ಮಿಷನ್ ಗಾಗಿ ತೆರಳಿದವರ ಬಳಿ ಸಂತಾಕ್ಲಾಸ್ ಟೋಪಿ, ಕ್ರಿಸ್ ಮಸ್ ಅಲಂಕಾರಿಕ ವಸ್ತುಗಳು ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.

"ಕ್ರಿಸ್‌ಮಸ್ ಟೋಪಿಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಯಾರು ವಿತರಿಸಿದರು? ಕ್ಯಾಪ್ಸುಲ್‌ನಲ್ಲಿ ಹೆಚ್ಚುವರಿ ಸ್ಥಳವು ಹೆಚ್ಚಿನ ಪ್ರೀಮಿಯಂನಲ್ಲಿದ್ದಾಗ ಅವುಗಳನ್ನು ಪ್ಯಾಕ್ ಮಾಡಲು ನೀವು ಸಾಕಷ್ಟು ಮುಂಚಿತವಾಗಿ ಯೋಚಿಸಿದ್ದೀರಾ?? ಎಂದು ಮತ್ತೋರ್ವ ನೆಟ್ಟಿಜನ್ ಪ್ರಶ್ನಿಸಿದ್ದಾರೆ.

ವಿಲಿಯಮ್ಸ್ ಮತ್ತು ಅವರ ಸಹವರ್ತಿ ಗಗನಯಾತ್ರಿ ಜೂನ್‌ನಿಂದ ISS ನಲ್ಲಿದ್ದಾರೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಅಸಮರ್ಪಕ ಕಾರ್ಯದಿಂದಾಗಿ ಎಂಟು ದಿನಗಳ ISS ಮಿಷನ್ ವಿಳಂಬವಾಗುತ್ತಿದೆ, ಅವರು ಮಾರ್ಚ್ ನಲ್ಲಿ ಮರಳುವ ನಿರೀಕ್ಷೆ ಇದೆ.

conspiracy theory ಗಳಿಗೆ NASA ಸ್ಪಷ್ಟನೆ

ಕ್ರಿಸ್ಮಸ್ ಟ್ರೀ, ಸಾಂಟಾ ಟೋಪಿಗಳು ಮತ್ತು ಇತರ ಅಲಂಕಾರಗಳು ಮತ್ತು ಉಡುಗೊರೆಗಳನ್ನು ನವೆಂಬರ್‌ನಲ್ಲಿ ಮೂರು ಟನ್ ಸ್ಪೇಸ್‌ಎಕ್ಸ್ ವಿತರಣೆಯ ಭಾಗವಾಗಿ ISS ಸಿಬ್ಬಂದಿಗೆ ಕಳುಹಿಸಲಾಗಿದೆ ಎಂದು US ಬಾಹ್ಯಾಕಾಶ ಸಂಸ್ಥೆ ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT