ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಯೋವಾ ಕಾಕಸ್‌ ನಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಗೆಲುವು

Sumana Upadhyaya

ವಾಷಿಂಗ್ಟನ್: ಈ ವರ್ಷಾಂತ್ಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದರ ಪ್ರಕ್ರಿಯೆಗಳು ಆರಂಭವಾಗಿದೆ. 

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಸೋಮವಾರ ಅಯೋವಾ ಕಾಕಸ್‌ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿಗಳು ಬಹಳ ಹಿಂದುಳಿದಿದ್ದಾರೆ, ಈ ಮೂಲಕ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಎರಡನೇ ಪ್ರಬಲ ಪೈಪೋಟಿಯಾಗಿ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅಥವಾ ಮಾಜಿ ಯುಎನ್ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಇದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಡಿಸಾಂಟಿಸ್ ಮತ್ತು ಹ್ಯಾಲೆ ಅವರು ಮಾಜಿ ಅಧ್ಯಕ್ಷ ಟ್ರಂಪ್ ಅವರಿಗೆ ಪ್ರಬಲ ಪರ್ಯಾಯ ಪ್ರತಿಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದಾರೆ. 

ಅಯೋವಾದ ಕ್ಲೈವ್‌ನಲ್ಲಿರುವ ಹಾರಿಜಾನ್ ಈವೆಂಟ್ಸ್ ಸೆಂಟರ್‌ನಲ್ಲಿ ಕಾಕಸ್ ಸೈಟ್‌ನಲ್ಲಿ ನೂರಾರು ಹರ್ಷೋದ್ಗಾರ ಬೆಂಬಲಿಗರನ್ನು ಉದ್ದೇಶಿಸಿ ನಿನ್ನೆ ಡೊನಾಲ್ಡ್ ಟ್ರಂಪ್ ಮಾತನಾಡಿದರು. ಅವರು ಈಗಾಗಲೇ ಅಧ್ಯಕ್ಷ ಜೋ ಬೈಡನ್ ವಿರುದ್ಧ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಫರ್ಧಿ ಎಂದು ನೋಡುತ್ತಿದ್ದಾರೆ.

SCROLL FOR NEXT