ಮಾಲ್ಡೀವ್ಸ್ ಸಂಸತ್ ನಲ್ಲಿ ಹೊಡೆದಾಟ 
ವಿದೇಶ

ಭಾರತ ವಿರೋಧಿ ಮನಸ್ಥಿತಿ: ಮಾಲ್ಡೀವ್ಸ್ ಸಂಸತ್ತಿನಲ್ಲಿ ಅಧ್ಯಕ್ಷ ಮುಯಿಝು ಪಕ್ಷದ ಸಂಸದರಿಗೆ ಥಳಿತ, ವಿಡಿಯೋ ವೈರಲ್!

ಸಂಸತ್ತಿನಲ್ಲಿ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಮಾಲ್ಡೀವ್ಸ್‌ನ ಸಂಸತ್ತಿನಲ್ಲಿ ನಡೆದಿರುವ ಘಟನೆಯೇ ಅಚ್ಚರಿ ಮೂಡಿಸಿದೆ. ಇಲ್ಲಿ ಸಂಸತ್ತಿನಲ್ಲಿ ಹೊಡೆದಾಟ, ಬಡೆದಾಟ ನಡೆದಿದ್ದು ಮಾತ್ರವಲ್ಲದೆ ಸಂಸದರು ಒಬ್ಬರನ್ನೊಬ್ಬರು ಎತ್ತಿಕೊಂಡು ನೆಲದ ಮೇಲೆ ಕುಕ್ಕಿದ್ದಾರೆ.

ಮಾಲಿ: ಸಂಸತ್ತಿನಲ್ಲಿ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಮಾಲ್ಡೀವ್ಸ್‌ನ ಸಂಸತ್ತಿನಲ್ಲಿ ನಡೆದಿರುವ ಘಟನೆಯೇ ಅಚ್ಚರಿ ಮೂಡಿಸಿದೆ. ಇಲ್ಲಿ ಸಂಸತ್ತಿನಲ್ಲಿ ಹೊಡೆದಾಟ, ಬಡೆದಾಟ ನಡೆದಿದ್ದು ಮಾತ್ರವಲ್ಲದೆ ಸಂಸದರು ಒಬ್ಬರನ್ನೊಬ್ಬರು ಎತ್ತಿಕೊಂಡು ನೆಲದ ಮೇಲೆ ಕುಕ್ಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ವಿಡಿಯೋದಲ್ಲಿ ಒಬ್ಬ ಸಂಸದ ಮತ್ತೊಬ್ಬನ ಕಾಲು ಎಳೆಯುತ್ತಿರುವುದು ಕಂಡು ಬರುತ್ತಿದೆ. ಮುಯಿಝು ಕ್ಯಾಬಿನೆಟ್ ಮೇಲಿನ ಮತದಾನಕ್ಕಾಗಿ ಇದೆಲ್ಲ ನಡೆದಿದೆ. ವಾಸ್ತವವಾಗಿ ನಿನ್ನೆ ಇಲ್ಲಿ ಸಚಿವ ಸಂಪುಟಕ್ಕೆ ಮತದಾನ ನಡೆಯಬೇಕಿತ್ತು. ಆದರೆ ವಿರೋಧ ಪಕ್ಷವು ನಾಲ್ವರು ಸಚಿವರ ಅನುಮೋದನೆಯನ್ನು ತಡೆಹಿಡಿಯುವುದಾಗಿ ಹೇಳಿದೆ. ಇದರ ವಿರುದ್ಧ ಆಡಳಿತ ಪಕ್ಷದವರು ಹರಿಹಾಯ್ದಿದ್ದು, ಮಾತಿನ ಚಕಮಕಿ ನಡೆಯಿತು.

ಇಂದು ಮಾಲ್ಡೀವ್ಸ್‌ನಲ್ಲಿ ಮುಯಿಝು ಅವರ ಕ್ಯಾಬಿನೆಟ್‌ನಲ್ಲಿ ಸಂಸತ್ತಿನಲ್ಲಿ ಮತದಾನ ನಡೆಯಬೇಕಿತ್ತು. ಇದಕ್ಕೆ ಭಾನುವಾರ ಮಧ್ಯಾಹ್ನ ಸಮಯ ನಿಗದಿಯಾಗಿತ್ತು. ಪ್ರತಿಪಕ್ಷಗಳು ಇದನ್ನು ನಿಲ್ಲಿಸುವಂತೆ ಕೇಳಿದಾಗ ಆಡಳಿತಾರೂಢ ಸಂಸದರು ಕಲಾಪವನ್ನು ನಿಲ್ಲಿಸಿದರು. ಅಲ್ಲದೆ ನಂತರ ಸ್ಪೀಕರ್ ಕೊಠಡಿಯನ್ನು ತಲುಪಿದ್ದು ಮತ ಚೀಟಿಯನ್ನೂ ಕಸಿದುಕೊಂಡಿದ್ದರು. ಸರ್ಕಾರದ ಬೆಂಬಲಿಗರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಯಾಬಿನೆಟ್ ಮಂತ್ರಿಗಳಿಗೆ ಅನುಮೋದನೆ ನೀಡಬೇಕು ಎಂದು ಈ ಜನರು ಒತ್ತಾಯಿಸುತ್ತಾರೆ. ಇದೇ ವೇಳೆ ಆಡಳಿತ ಪಕ್ಷದವರು ಮತದಾನ ಮಾಡಲು ಬಿಡುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದಾರೆ.

ವಾಸ್ತವವಾಗಿ, ಮಾಲ್ಡೀವ್ಸ್‌ನ ಹೊಸ ಅಧ್ಯಕ್ಷರನ್ನು ಕಳೆದ ವರ್ಷವಷ್ಟೇ ಆಯ್ಕೆ ಮಾಡಲಾಗಿದೆ. ಅವರ ಕೆಲವು ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಆದ್ದರಿಂದ ಪ್ರತಿಪಕ್ಷಗಳು ಅವರನ್ನು ಸಂಪುಟಕ್ಕೆ ಸೇರಿಸಬಾರದು. ಅಟಾರ್ನಿ ಜನರಲ್ ಅಹ್ಮದ್ ಉಷಮ್, ವಸತಿ ಭೂಮಿ ಮತ್ತು ನಗರಾಭಿವೃದ್ಧಿ ಸಚಿವ ಡಾ. ಅಲಿ ಹೈದರ್, ಇಸ್ಲಾಮಿಕ್ ವ್ಯವಹಾರಗಳ ಸಚಿವ ಡಾ. ಮೊಹಮ್ಮದ್ ಶಹೀಮ್ ಅಲಿ ಸಯೀದ್ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವ ಮೊಹಮ್ಮದ್ ಸಯೀದ್ ವಿರುದ್ಧ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ': ಕೇರಳ BJP ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ; ಅಮಿತ್ ಶಾಗೆ ಪತ್ರ ಬರೆದ ಕಾಂಗ್ರೆಸ್, ಕ್ರಮಕ್ಕೆ ಆಗ್ರಹ

Asia Cup 2025: ಸೋಲು ಬೆನ್ನಲ್ಲೇ ಟ್ರೋಫಿಯೊಂದಿಗೆ ಮೈದಾನ ತೊರೆದ ಪಾಕ್ ಸಚಿವ; ICCಗೆ ದೂರು ನೀಡಲು BCCI ಮುಂದು..!

Asia Cup 2025: ಭಾರತ vs ಪಾಕಿಸ್ತಾನ ಫೈನಲ್ ಟ್ರೋಫಿ ವಿವಾದ; ಮೊಹ್ಸಿನ್ ನಖ್ವಿ ಪ್ರತಿಕ್ರಿಯೆ, ಮೋದಿ ಟ್ವೀಟ್‌ಗೆ ಕಿಡಿ

Asia Cup 2025: ಪಾಕ್ ಸಚಿವನಿಂದ ಟ್ರೋಫಿ ಸ್ವೀಕರಿಸಲು ಭಾರತ ನಕಾರ; ತಡರಾತ್ರಿ ದುಬೈನಲ್ಲಿ ಹೈಡ್ರಾಮಾ, ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ..!

ಭಾರತದಿಂದ ಔಷಧ ಆಮದಿಗೆ ಶೇ.100 ರಷ್ಟು ಸುಂಕ: US ಅಹಂಕಾರಕ್ಕೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!

SCROLL FOR NEXT