ಸಾಂದರ್ಭಿಕ ಚಿತ್ರ 
ವಿದೇಶ

ಮಾಸ್ಕೋ: ಆನ್‌ಲೈನ್‌ನಲ್ಲಿ ಸಲಾಡ್ ಆರ್ಡರ್ ಮಾಡಿ ತಿಂದ ನೂರಾರು ಜನ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಾಸ್ಕೋದಲ್ಲಿ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಫುಡ್ ಪಾಯಿಸನ್ ನಿಂದ ಏಕಾಏಕಿ 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಾಸ್ಕೋ: ಮಾಸ್ಕೋದಲ್ಲಿ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಫುಡ್ ಪಾಯಿಸನ್ ನಿಂದ ಏಕಾಏಕಿ 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕನಿಷ್ಠ 30 ಜನ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರೋಗಿಗಳನ್ನು ಶಂಕಿತ ಆಹಾರದಿಂದ ಹರಡುವ ಬೊಟುಲಿಸಮ್‌ನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ನರಮಂಡಲದ ಮೇಲೆ ದಾಳಿ ಮಾಡುವ ಮತ್ತು ಉಸಿರಾಟದ ವೈಫಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದಾಗಿದೆ.

ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ಸೇವೆಯಿಂದ ಸಲಾಡ್‌ ಆರ್ಡರ್ ಮಾಡಿ ತಿಂದ ನಂತರ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಯ ನಂತರ ಪ್ರಕರಣದ ತನಿಖೆಯ ಮಧ್ಯೆ ಭಾನುವಾರ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

"ಒಟ್ಟು 121 ಜನರು ಅಸ್ವಸ್ಥಗೊಂಡಿದ್ದಾರೆ" ಎಂದು ಮಾಸ್ಕೋದ ಉಪ ಮೇಯರ್ ಅನಸ್ತಾಸಿಯಾ ರಾಕೋವಾ ಅವರು ಸೋಮವಾರ ಹೇಳಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

"ಅಸ್ವಸ್ಥಗೊಂಡವರಲ್ಲಿ 55 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರಲ್ಲಿ 30 ಜನ ತೀವ್ರ ನಿಗಾದಲ್ಲಿದ್ದಾರೆ". ಮಾಸ್ಕೋ ಪ್ರಾಸಿಕ್ಯೂಟರ್ ಕಚೇರಿಯು ಗ್ರಾಹಕರ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT