ಸಂಗ್ರಹ ಚಿತ್ರ 
ವಿದೇಶ

PoK: ಪಾಕಿಸ್ತಾನ ವಿರುದ್ಧ ಮೊಳಗಿದ ಆಜಾದಿ ಘೋಷಣೆ; ಸೇನೆ ಗುಂಡೇಟಿಗೆ 3 ಬಲಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಏರುತ್ತಿರುವ ಹಣದುಬ್ಬರದ ಬೆನ್ನಲ್ಲೇ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟಿದೆ. ಅಲ್ಲಿನ ಹಿಂಸಾತ್ಮಕ ಪ್ರತಿಭಟನೆಗಳು ಮುಂದೂವರೆದಿದೆ. ಸದ್ಯ, ಪಿಒಕೆಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಏರುತ್ತಿರುವ ಹಣದುಬ್ಬರದ ಬೆನ್ನಲ್ಲೇ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟಿದೆ. ಅಲ್ಲಿನ ಹಿಂಸಾತ್ಮಕ ಪ್ರತಿಭಟನೆಗಳು ಮುಂದೂವರೆದಿದೆ. ಸದ್ಯ, ಪಿಒಕೆಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಶುಕ್ರವಾರದಿಂದ ಈ ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸತತ ನಾಲ್ಕನೇ ದಿನವಾದ ಸೋಮವಾರವೂ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಸಾವಿನ ಸಂಖ್ಯೆ ಮೂರಕ್ಕೇರಿದೆ. ಇವರಲ್ಲಿ ಇಬ್ಬರು ಪ್ರತಿಭಟನಾಕಾರರು ಮತ್ತು ಒಬ್ಬ ಎಸ್‌ಐ ಸೇರಿದ್ದಾರೆ. ಭಾನುವಾರ ನಡೆದ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ವಾಸ್ತವವಾಗಿ, ಕಳೆದ ನಾಲ್ಕು ದಿನಗಳಿಂದ ಪಿಒಕೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಮತ್ತು ವಕೀಲರು ರಚಿಸಿರುವ ಜಂಟಿ ಅವಾಮಿ ಕ್ರಿಯಾ ಸಮಿತಿಯು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ತೆರಿಗೆಗಳ ಹೆಚ್ಚಳದ ವಿರುದ್ಧ ರಾಜಧಾನಿ ಮುಜಫರಾಬಾದ್‌ಗೆ ಮೆರವಣಿಗೆಗೆ ಕರೆ ನೀಡಿತ್ತು. ಸೋಮವಾರವೂ ಲಕ್ಷಾಂತರ ಪ್ರತಿಭಟನಾಕಾರರು ಮುಜಫರಾಬಾದ್ ಕಡೆಗೆ ತಮ್ಮ ಸುದೀರ್ಘ ಮಾರ್ಚ್ ಮುಂದುವರೆಸಿದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾದ ಮೆರವಣಿಗೆಯನ್ನು ತಡೆಯಲು ಪೊಲೀಸರು ಬಲಪ್ರಯೋಗ ಮಾಡಿದರು. ಭಾನುವಾರ, ಗುಂಪಿನಲ್ಲಿದ್ದವರೊಬ್ಬರು ಪೊಲೀಸ್ ಎಸ್‌ಐ ಅದ್ನಾನ್ ಖುರೇಷಿ ಅವರನ್ನು ಗುಂಡಿಕ್ಕಿ ಕೊಂದರು. ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಪೊಲೀಸರೇ ಇದ್ದರು. ಇಲ್ಲಿಯವರೆಗೆ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ಪಿಒಕೆಯಲ್ಲಿ ನಡೆಯುತ್ತಿರುವ ಹಿಂಸಾತ್ಮಾಕ ಪ್ರತಿಭಟನೆಗೆ ಪಾಕಿಸ್ತಾನ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ಶಹಬಾಜ್ ಷರೀಫ್ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಒಕೆಗಾಗಿ 23 ಬಿಲಿಯನ್ ರೂಪಾಯಿಗಳ ಬಜೆಟ್ ಅನ್ನು ಅನುಮೋದಿಸಿದೆ. ಸ್ಥಳೀಯ ಸರ್ಕಾರವು ವಿದ್ಯುತ್ ದರ ಮತ್ತು ಬ್ರೆಡ್ ಬೆಲೆಯಲ್ಲಿ ಕಡಿತವನ್ನು ಘೋಷಿಸಿದೆ.

ಭಿಂಬರ್‌ನಿಂದ ಹೊರಟ ಪ್ರತಿಭಟನಾಕಾರರ ಬೆಂಗಾವಲು ಸೋಮವಾರ ದಿರ್ಕೋಟ್‌ನಿಂದ ಮುಜಫರಾಬಾದ್‌ಗೆ ಪ್ರವೇಶಿಸಿತ್ತು. ಈ ಪ್ರತಿಭಟನಾಕಾರರು ಮುಜಫರಾಬಾದ್‌ನಲ್ಲಿ ವಿಧಾನಸಭೆಯನ್ನು ಮುತ್ತಿಗೆ ಹಾಕಲಿದ್ದಾರೆ. ಪಿಒಕೆಯಲ್ಲಿ ನಾಲ್ಕನೇ ದಿನವೂ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ವೇಳೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಕೂಡ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಸಕ್ರಿಯರಾಗಿದ್ದಾರೆ. ಪರಿಸ್ಥಿತಿಯ ಬಗ್ಗೆ ಶಹಬ್ಬಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ಸೋಮವಾರ ಪ್ರತಿಭಟನಾಕಾರರು ಮತ್ತು ಸ್ಥಳೀಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಪಿಒಕೆಗೆ 23 ಬಿಲಿಯನ್ ರೂಪಾಯಿಗಳ ಬಜೆಟ್ ಅನ್ನು ಅನುಮೋದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪರಿಹಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ': ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ

ಜಾತಿ ರಹಿತ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಸಂಚಾರ ದಂಡ ರಿಯಾಯಿತಿಯಿಂದ ಬರೋಬ್ಬರಿ 106 ಕೋಟಿ ಸಂಗ್ರಹ: 37.86 ಲಕ್ಷ ಪ್ರಕರಣ ಇತ್ಯರ್ಥ

AI ವೀಡಿಯೊ ಮೂಲಕ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ತೇಜೋವಧೆ: Congress, ಐಟಿ ಸೆಲ್ ವಿರುದ್ಧ ಎಫ್ಐಆರ್

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ

SCROLL FOR NEXT