ಡೊನಾಲ್ಡ್ ಟ್ರಂಪ್  
ವಿದೇಶ

US Election 2024: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯಿತೇ? ಮುಂದಿನ ಪ್ರಕ್ರಿಯೆ ಏನೇನು?

ನಿನ್ನೆ ನವೆಂಬರ್ 6 ರಂದು ಅಮೆರಿಕ ಅಧ್ಯಕ್ಷರ ಘೋಷಣೆಯು ಮಹತ್ವದ ಮೈಲಿಗಲ್ಲು ಆಗಿದ್ದರೂ, ಟ್ರಂಪ್ ಅವರ ಗೆಲುವಿನ ಅಂತಿಮ ದೃಢೀಕರಣವು ಎಲೆಕ್ಟೊರಲ್ ಕಾಲೇಜ್ ಪ್ರಕ್ರಿಯೆ ಮೂಲಕ ನಡೆಯುತ್ತದೆ.

ಅಭೂತಪೂರ್ವ, ಬೆರಗುಗೊಳಿಸುವ ರಾಜಕೀಯ ಪುನರಾಗಮನದಲ್ಲಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2024 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕೃತವಾಗಿ ಜಯ ಸಾಧಿಸಿದ್ದಾರೆ, ಇದು ಅಮೆರಿಕಾದ ಇತಿಹಾಸದಲ್ಲಿ ಮಹತ್ವದ ಕ್ಷಣವನ್ನು ಗುರುತಿಸುತ್ತದೆ. ಕಮಲಾ ಹ್ಯಾರಿಸ್ ರನ್ನು ಸೋಲಿಸಿ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರು ಎಂದು ಘೋಷಣೆಯಾಗಿದೆ. ಹಾಗಾದರೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ಇಲ್ಲಿಗೇ ಕೊನೆಯಾಯಿತೇ ಎಂದು ಕೇಳಿದರೆ ಇಲ್ಲ.

ಎಲೆಕ್ಟೊರಲ್ ಕಾಲೇಜ್ ನಿಂದ ಡಿಸೆಂಬರ್ 17 ರಂದು ಅಧಿಕೃತವಾಗಿ ಮತ ಚಲಾವಣೆ

ನಿನ್ನೆ ನವೆಂಬರ್ 6 ರಂದು ಅಮೆರಿಕ ಅಧ್ಯಕ್ಷರ ಘೋಷಣೆಯು ಮಹತ್ವದ ಮೈಲಿಗಲ್ಲು ಆಗಿದ್ದರೂ, ಟ್ರಂಪ್ ಅವರ ಗೆಲುವಿನ ಅಂತಿಮ ದೃಢೀಕರಣವು ಎಲೆಕ್ಟೊರಲ್ ಕಾಲೇಜ್ ಪ್ರಕ್ರಿಯೆ ಮೂಲಕ ನಡೆಯುತ್ತದೆ. ಅಮೆರಿಕ ಸಂವಿಧಾನದಿಂದ ಸ್ಥಾಪಿಸಲ್ಪಟ್ಟ ಎಲೆಕ್ಟೋರಲ್ ಕಾಲೇಜ್ ತನ್ನ ಮತಗಳನ್ನು ಡಿಸೆಂಬರ್ 17, 2024 ರಂದು ಅಧಿಕೃತವಾಗಿ ಚಲಾಯಿಸಲು ಸಜ್ಜಾಗಿದೆ. ನಂತರ ಮುಂದಿನ ವರ್ಷ ಜನವರಿ 6, 2025 ರಂದು ಹೊಸ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸುವ ಮೊದಲು ಮತಗಳನ್ನು ಯುಎಸ್ ಕಾಂಗ್ರೆಸ್ ಜನವರಿ 20, 2025ರಂದು ಎಣಿಕೆ ಮಾಡಿ ದೃಢೀಕರಿಸುತ್ತದೆ.

ಮುಂದೆ ಏನಾಗುತ್ತದೆ?

ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಔಪಚಾರಿಕವಾಗಿ ಆಯ್ಕೆ ಮಾಡುವಲ್ಲಿ ಎಲೆಕ್ಟೋರಲ್ ಕಾಲೇಜ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಒಂದು ರಾಜ್ಯದಲ್ಲಿ ಜನಪ್ರಿಯ ಮತವನ್ನು ಗೆಲ್ಲುವ ಅಭ್ಯರ್ಥಿಯು ಆ ರಾಜ್ಯದ ಎಲ್ಲಾ ಚುನಾವಣಾ ಮತಗಳನ್ನು ಭದ್ರಪಡಿಸುತ್ತಾನೆ. ಈ ಮತಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖವಾಗುತ್ತವೆ ಹೊರತು ಕೇವಲ ಜನಪ್ರಿಯ ಮತವಲ್ಲ.

ಎಲ್ಲಾ ಮತಗಳನ್ನು ಎಣಿಸಿದ ನಂತರ, ಮತದಾರರು ಡಿಸೆಂಬರ್ 17, 2024 ರಂದು ಮತ ಹಾಕುತ್ತಾರೆ. ಚುನಾವಣಾ ಮತಗಳನ್ನು ಅಧಿಕೃತವಾಗಿ ಎಣಿಸಲು ಮತ್ತು ಚುನಾವಣಾ ಫಲಿತಾಂಶಗಳನ್ನು ಖಚಿತಪಡಿಸಲು ಕಾಂಗ್ರೆಸ್ ಜನವರಿ 6, 2025 ರಂದು ಸಭೆ ಸೇರುತ್ತದೆ. ನಂತರ ನೂತನ ಅಧ್ಯಕ್ಷರು ಜನವರಿ 20, 2025 ರಂದು ಪ್ರಮಾಣವಚನ ಸ್ವೀಕರಿಸುತ್ತಾರೆ.

ಚುನಾವಣಾ ಫಲಿತಾಂಶಗಳ ಪ್ರಮಾಣೀಕರಣ ಮತ್ತು ದೃಢೀಕರಣ

ಈ ಪ್ರಮಾಣೀಕರಣದ ಪ್ರಕ್ರಿಯೆ ಮತ್ತು ಚುನಾವಣಾ ಫಲಿತಾಂಶಗಳ ಅಂತಿಮ ದೃಢೀಕರಣವು ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಣಾಯಕ ಹಂತವಾಗಿದೆ. 2021 ರಲ್ಲಿ ಈ ಹಂತದಲ್ಲಿ ಟ್ರಂಪ್ ಜೊ ಬೈಡನ್ ಅವರು ಅಧ್ಯಕ್ಷರು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ನಂತರ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್‌ಗೆ ದಾಳಿ ಮಾಡುವ ಮೂಲಕ ಪ್ರಮಾಣೀಕರಣ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ಪ್ರಯತ್ನಿಸಿದ್ದರು.

ಜನವರಿ 20ರಂದು ಪ್ರಮಾಣವಚನ

ಅಮೆರಿಕವು ಎರಡನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರು ಎಂದು ನಿರೀಕ್ಷಿಸುತ್ತಿರುವಾಗ ಜನವರಿಯಲ್ಲಿ ಅವರ ಪ್ರಮಾಣವಚನ ಕಣ್ಣಮುಂದೆ ಬರುತ್ತದೆ. ಅಲ್ಲಿ ಹೊಸ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸುತ್ತಾರೆ, ಇದು ಯುಎಸ್ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಗುರುತಿಸುತ್ತದೆ.

ಇತಿಹಾಸ ನಿರ್ಮಿಸಿದ ಚುನಾವಣೆ

ಈ ಬಾರಿಯ ಗೆಲುವು ಟ್ರಂಪ್‌ ಅವರಿಗೆ ಮಹತ್ವದ ಕ್ಷಣವನ್ನು ಸೂಚಿಸುತ್ತದೆ, ಗ್ರೋವರ್ ಕ್ಲೀವ್‌ಲ್ಯಾಂಡ್‌ ರಂತೆ ಟ್ರಂಪ್ ಅವರು ಅತಿ ಹಿರಿಯ ವಯಸ್ಸಿನಲ್ಲಿ ತಮ್ಮ 78ನೇ ವರ್ಷದಲ್ಲಿ ಅಮೆರಿಕ ಅಧ್ಯಕ್ಷರಾಗುತ್ತಿದ್ದಾರೆ. ಶ್ವೇತಭವನಕ್ಕೆ ಟ್ರಂಪ್ ಹಿಂದಿರುಗುವಿಕೆಯು ದೇಶದ ಮುಂದಿನ ಭವಿಷ್ಯ ಮತ್ತು ಅವರ ನಾಯಕತ್ವದ ನಿರಂತರ ಪ್ರಭಾವದ ಮೇಲೆ ರಾಜಕೀಯ ಚರ್ಚೆಗಳನ್ನು ಪುನರುಜ್ಜೀವನಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT