ಡೊನಾಲ್ಡ್ ಟ್ರಂಪ್ ಮತ್ತು ಸೂಸಿ ವೈಲ್ಸ್ 
ವಿದೇಶ

ಮಹಿಳೆಗೆ ಆದ್ಯತೆ ನೀಡಿದ ಡೊನಾಲ್ಡ್ ಟ್ರಂಪ್: ಶ್ವೇತಭವನ ಮುಖ್ಯಸ್ಥೆಯಾಗಿ ಸೂಸಿ ವೈಲ್ಸ್ ನೇಮಕ

ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿ ಸೂಸಿ ಅವರು ಮೊದಲ ಮಹಿಳಾ ಸಿಬ್ಬಂದಿ ಮುಖ್ಯಸ್ಥರಾಗುವುದು ಅರ್ಹವಾದ ಗೌರವವಾಗಿದೆ. ಅವರು ನಮ್ಮ ದೇಶ ಹೆಮ್ಮೆಪಡುವಂತೆ ಕೆಲಸ ಮಾಡುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವರ್ಷ ತಮ್ಮ ಚುನಾವಣಾ ಪ್ರಚಾರ ಸಮಯದಲ್ಲಿ ಸಾಥ್ ನೀಡಿದ್ದ ಸೂಸಿ ವೈಲ್ಸ್ ಅವರನ್ನು ಶ್ವೇತಭವನದ ಮುಖ್ಯಸ್ಥರೆಂದು ಘೋಷಿಸಿದ್ದು, ಅಮೆರಿಕದಲ್ಲಿ ಈ ಪ್ರಭಾವಿ ಹುದ್ದೆಯನ್ನು ವಹಿಸುತ್ತಿರುವ ಮೊದಲ ಮಹಿಳೆಯಾಗಿದ್ದಾರೆ.

ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಉತ್ತಮವಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ವೈಲ್ಸ್ ಅವರ ಆಂತರಿಕ ವಲಯದ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಮನ್ನಣೆ ಪಡೆದಿದ್ದಾರೆ. ಅಮೆರಿಕವನ್ನು ಮತ್ತಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸೂಸಿ ದಣಿವರಿಯಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ.

ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿ ಸೂಸಿ ಅವರು ಮೊದಲ ಮಹಿಳಾ ಸಿಬ್ಬಂದಿ ಮುಖ್ಯಸ್ಥರಾಗುವುದು ಅರ್ಹವಾದ ಗೌರವವಾಗಿದೆ. ಅವರು ನಮ್ಮ ದೇಶ ಹೆಮ್ಮೆಪಡುವಂತೆ ಕೆಲಸ ಮಾಡುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಇತಿಹಾಸದಲ್ಲಿ ಶ್ರೇಷ್ಠ ರಾಜಕೀಯ ಜಯ ಸಾಧಿಸಲು ಸೂಸಿ ವೈಲ್ಸ್ ನನಗೆ ಸಹಾಯ ಮಾಡಿದರು. ಅವರು ನನ್ನ 2016 ಮತ್ತು 2020 ರ ಯಶಸ್ವಿ ಪ್ರಚಾರಗಳ ಅವಿಭಾಜ್ಯ ಅಂಗವಾಗಿದ್ದರು ಎಂದು ಟ್ರಂಪ್ ಹೇಳಿದ್ದಾರೆ. ಸೂಸಿ ಕಠಿಣ, ಬುದ್ಧಿವಂತಿಕೆಯ, ನವೀನ, ಮತ್ತು ಸಾರ್ವತ್ರಿಕವಾಗಿ ಮೆಚ್ಚುಗೆ ಮತ್ತು ಗೌರವಾನ್ವಿತ ವ್ಯಕ್ತಿ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.

ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 27, 2024 ರಂದು ನ್ಯಾಶ್‌ವಿಲ್ಲೆಗೆ ಆಗಮಿಸುತ್ತಿದ್ದಂತೆ ನ್ಯಾಶ್‌ವಿಲ್ಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಂಪ್ ಸಹ-ಪ್ರಚಾರ ನಿರ್ವಾಹಕಿಯಾಗಿ ಸೂಸಿ ವೈಲ್ಸ್ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT